ಕ್ರೈಂ ಸ್ಟೋರಿಸುದ್ದಿ

4 ದಿನಗಳ ಕಾಲ ಜೀವಂತ ಸಮಾಧಿಯಾಗಿದ್ದ ವ್ಯಕ್ತಿಯ ರಕ್ಷಣೆ! ನೆಲದಿಂದ ಬರ್ತಿದ್ದ ಅಳು ಕೇಳಿ ಪೊಲೀಸರಿಗೆ ಆಘಾತ

ಮೊಲ್ಡೋವಾ : ನಾಲ್ಕು ದಿನಗಳ ಕಾಲ ಜೀವಂತ ಸಮಾಧಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ ಘಟನೆ ಮೊಲ್ಡೋವಾದಲ್ಲಿ ನಡೆದಿದೆ. 74 ವರ್ಷದ ಮಹಿಳೆಯ ಸಾವಿನ ಬಗ್ಗೆ ತನಿಖೆ ನಡೆಸುವಾಗ ಅಧಿಕಾರಿಗಳಿಗೆ ಜೀವಂತ ಸಮಾಧಿಯಾಗಿರುವ ವ್ಯಕ್ತಿಯ ಅಳು ಕೇಳಿಸಿದ್ದು, ಕೂಡಲೇ ಆತನನ್ನು ಪೊಲೀಸರು ರಕ್ಷಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಮೇ 13 ರಂದು ಘಟನೆ ನಡೆದಿದೆ.

ಮಹಿಳೆಯ ಶವವು ಆಕೆಯ ಸಂಬಂಧಿಕರ ಮನೆಯಲ್ಲಿ ಪೊಲೀಸರಿಗೆ ಪತ್ತೆಯಾಗಿದೆ. ಅಲ್ಲಿಯೇ ಹತ್ತಿರದಲ್ಲಿ ಸಹಾಯಕ್ಕಾಗಿ ಗೋಗರೆಯುತ್ತಿದ್ದ ವ್ಯಕ್ತಿಯೊಬ್ಬರ ಅಳು ಪೊಲೀಸರಿಗೆ ಕೇಳಿದೆ. ತಕ್ಷಣ ಅಧಿಕಾರಿಗಳು ಅಲ್ಲಿ ಅಗೆಯಲು ಶುರುಮಾಡಿದ್ದು, ತಾತ್ಕಾಲಿಕ ನೆಲಮಾಳಿಗೆಯ ಪ್ರವೇಶದ್ವಾರ ಸಿಕ್ಕಿದೆ. ಅಲ್ಲಿ 62 ವರ್ಷದ ವ್ಯಕ್ತಿಯನ್ನು ಕೂಡಿ ಹಾಕಲಾಗಿತ್ತು. ಅವರನ್ನು ಪೊಲೀಸರು ರಕ್ಷಿಸಿದ್ದು, ಆ ವಿಡಿಯೋವನ್ನು ಈಗ ಬಿಡುಗಡೆ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button