ಮಂಡ್ಯದ ಕೆರೆಗೋಡು ಹನುಮ ಧ್ವಜ ವಿವಾದಕ್ಕೆ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಗೌಡ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಮಂಡ್ಯ ಶಾಸಕ ರವಿಕುಮಾರ್ ಗೌಡ ತಿರುಗೇಟಿಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಂಗಾಲಾಗಿದ್ದು ಮಂಡ್ಯ ಶಾಸಕ ಗಣಿಗ ರವಿ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಂಡ್ಯ ಕೆರೆಗೋಡು ಹನುಮ ಧ್ವಜ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದ್ದರೆ ಮಂಡ್ಯ ಶಾಸಕ ಗಣಿಗ ರವಿ ಎರಡೂ ಪಕ್ಷಗಳಿಗೆ ಸೆಡ್ಡು ಹೊಡೆದಿದ್ದಾರೆ.
ಮಂಡ್ಯದ ಶಾಸಕ ರವಿಕುಮಾರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಭಾರಿ ಜನ ಬೆಂಬಲ ವ್ಯಕ್ತವಾಗ್ತಿದೆ. ಇದೇ ವೇಳೆ ಮಂಡ್ಯ ಕ್ಷೇತ್ರದ ಜನ ಶಾಸಕ ರವಿಕುಮಾರ್ ಅವರಿಗೆ ರಾಷ್ಟ್ರ ಧ್ವಜ ನೀಡಿದ್ದಾರೆ.
ಮಂಡ್ಯದ ರೈತರು, ಮಹಿಳೆಯರು ಶಾಸಕ ರವಿಕುಮಾರ್ ರವರಿಗೆ ತ್ರಿವರ್ಣ ಧ್ವಜ ನೀಡುವ ಮೂಲಕ ಕೆರೆಗೋಡು ಹನುಮ ಧ್ವಜ ವಿವಾದಕ್ಕೆ ತಿರುಗೇಟು ನೀಡಿದ್ದಾರೆ. ನಮಗೆ ರಾಷ್ಟ್ರ ಧ್ವಜವೇ ಪರಮೋಚ್ಚವೆಂದು ಶಾಸಕ ರವಿಕುಮಾರ್ ಗಣಿಗ ಹೇಳಿದ್ದು ಕಾಂಗ್ರೆಸ್ ನಾಯಕರು ಸಾಮಾನ್ಯ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಗಣಿಗ ರವಿ ಪರವಾಗಿ ಬ್ಯಾಟ್ ಬೀಸಿದ್ದಾರೆ.