Wednesday, April 30, 2025
24 C
Bengaluru
LIVE
ಮನೆರಾಜಕೀಯಕಾಂಗ್ರೆಸ್​ ಸೇರ್ತಾರಾ? ಸುದ್ದಿಗೋಷ್ಠಿಯಲ್ಲಿ ಮುನೇನಕೊಪ್ಪ ಹೇಳಿದ್ದೇನು..?

ಕಾಂಗ್ರೆಸ್​ ಸೇರ್ತಾರಾ? ಸುದ್ದಿಗೋಷ್ಠಿಯಲ್ಲಿ ಮುನೇನಕೊಪ್ಪ ಹೇಳಿದ್ದೇನು..?

ಹುಬ್ಬಳ್ಳಿ :  ಕಾಂಗ್ರೆಸ್ ವಿರೋಧಿ ಮನೋಭಾವದಲ್ಲಿ ಬೆಳೆದು ಬಂದಿದ್ದೇನೆ. ಬಿಜೆಪಿಯಲ್ಲೇ ಉಳಿದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ, ಕಾಂಗ್ರೆಸ್ ಪಕ್ಷ ಸೇರುವ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಊಹಾ ಪೋಹಗಳಿಗೆ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ತೆರೆ ಎಳಿದಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಕಾಂಗ್ರೆಸ್ ವಿರೋಧಿ‌. ಅದಾಗ್ಯೂ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಆತ್ಮೀಯರಿದ್ದಾರೆ. ಶೆಟ್ಟರ ಬಿಜೆಪಿ ತೊರೆದ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಹಲವರು ನನಗೂ ಸಲಹೆ ನೀಡಿದ್ದರು. ಆದರೆ, ನಾನು ಬಿಜೆಪಿಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದೇನೆ‌. ಬಿಜೆಪಿ ನಾಯಕರಾದ ಜೆ.ಪಿ. ನಡ್ಡಾ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಹಾಗೂ ಪ್ರಹ್ಲಾದ ಜೋಶಿ ಅವರು ಜಗದೀಶ ಶೆಟ್ಟರ ಅವರನ್ನು ಕರೆತಂದಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನೂ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಶೆಟ್ಟರ, ಬಿಜೆಪಿಗೆ ವಾಪಸಾಗಿರುವುದರಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ರಾಜ್ಯದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಆಯ್ಕೆ ಬಳಿಕ ಅನೇಕ ಬದಲಾವಣೆ ಆಗಿವೆ. ಈ ಹಿಂದೆ ಶೆಟ್ಟರ್ ಸ್ವಾಭಿಮಾನಕ್ಕೆ ದಕ್ಕೆಯಾಗಿದೆ ಎಂದು ಪಕ್ಷ ತೊರೆಯುವ ಕೆಲಸ ಮಾಡಿದ್ದರು, ಇದೀಗ ಸೂಕ್ತವಾದ ಸ್ಥಾನಮಾನ ಹೈಕಮಾಂಡ ನೀಡಿದೆ. ಈ ಹಿನ್ನೆಲೆ ಜಗದೀಶ್ ಶೆಟ್ಟರ್ ಪುನಃ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಲಿಂಗಾಯತ ಸಮೂದಾಯದ ನಾಯಕರಿಗೆ ಅನ್ಯಾಯ ಅಗಿದೆ ಎಂದು ನಾನು ಎಲ್ಲಿ ಹೇಳಿಲ್ಲ, ಆದರೆ ಎಲ್ಲರಿಗೂ ಸರಿಸಮಾನ ಅವಕಾಶ ಸಿಗಬೇಕೆಂಬುದು ನನ್ನ ಆಸೆ ಅದಕ್ಕೆ ಬದ್ದವಾಗಿದ್ದೇನೆ. ಧಾರವಾಡ ಜಿಲ್ಲೆಯ ತಾಲೂಕುಗಳಲ್ಲಿ 2-3 ಬಣಗಳಿವೆ. ಅವುಗಳನ್ನು ಮುಂದಿನಗಳಲ್ಲಿ ಚರ್ಚಿಸಿ ಸರಿಪಡಿಸಲಾಗುವುದು, ನಮ್ಮೆಲ್ಲರ ಗುರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವ ಉದ್ದೇಶ ಮಾತ್ರ, ಅದಕ್ಕಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ತಿಳಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments