ಬೀದರ್ : ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ರಾಜ್ಯಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಔರಾದ್ ಮೀಸಲು ವಿಧನಾಸಭಾ ಕ್ಷೇತ್ರದ ಮಾಜಿ ಸಚಿವ ಪ್ರಭು ಚೌಹಾಣ್ ರಾಜ್ಯಾಧ್ಯಕ್ಷರ ಕಾಲಿಗೆ ಬಿದಿದ್ದಾರೆ.
ಶಾಸಕ ಪ್ರಭು ಚೌಹಾಣ್ ಅವರು ಕೇಂದ್ರ ಸಚಿವ ಭಗವಾನ್ ಖೂಬಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 2024 ರಲ್ಲಿ ಒಳ್ಳೇಯ ಅರ್ಭಯರ್ಥಿ ತನ್ನಿ ಎಂದು ಮನವಿ ಮಾಡಿ ಕಾಲಿಗೆ ಬಿದಿದ್ದಾರೆ. 10 ವರ್ಷಗಳಿಂದ ನನಗೆ ಅನ್ಯಾಯವಾಗಿದೆ. ಬೀದರ್ಗೆ ಒಳ್ಳೆಯ ಅಭ್ಯರ್ಥಿ ನೀಡಿ. ಕಾರ್ಯಕರ್ತರನ್ನು ಜೈಲಿಗೆ ಕಳುಹಿಸೊರು ಬೇಡಾ, ಕಾರ್ಯಕರ್ತರಿಂದಲೇ ನಾವಿದ್ದೇವೆ.
ಕಾರ್ಯಕರ್ತರನ್ನು ಗೌರವಿಸೋರಿಗೆ ಟಿಕೆಟ್ ನೀಡಿ ಎಂದು ಸಲಹೆ ನೀಡಿದ್ದಾರೆ. ನಾನು ಯಾವತ್ತು ಶಾಸಕ ಎಂದುಕೊಂಡಿಲ್ಲಾ, ಬಿಜೆಪಿ ಕಾರ್ಯಕರ್ತನಾಗಿದ್ದಾನೆ ಎಂದು ಹೇಳಿದರು.