#Exclusive Newsರಾಜ್ಯ

ಮೂವರು ಪ್ರಭಾವಿ ಸಚಿವರ ಬುಡಕ್ಕೆ ಬರುತ್ತಾ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ?

ಲೋಕಾಯುಕ್ತ ಹೆಸರಲ್ಲಿ ಸುಲಿಗೆ ಕೇಸ್ ಗೆ ಮಿನಿಸ್ಟರ್ ಟ್ವಿಸ್ಟ್ ಸಿಕ್ಕಿದೆ. ರಾಜ್ಯದ ಮೂವರು ಪ್ರಭಾವಿ ಸಚಿವರ ಬುಡಕ್ಕೆ ಲೋಕಾಯುಕ್ತ ಬುಕಿಂಗ್ ಗೇಟ್ ಹಗರಣ ಬರುವಂತೆ ಕಾಣ್ತಿದೆ. ಬಂಧಿತ ಆರೋಪಿ ಜೊತೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಿಕಟ ನಂಟು ಇರುವುದು ಲೋಕಾಯುಕ್ತ ತನಿಖೆಯಲ್ಲಿ ಬಟಾಬಯಲಾಗಿದೆ.

ವಿಚಾರಣೆ ವೇಳೆ ಆರೋಪಿ ಪೇದೆ ನಿಂಗಪ್ಪ ಸ್ಫೋಟಕ ವಿಚಾರ ಬಯಲು ಮಾಡಿದ್ದಾನೆ. ಮೂವರು ಪ್ರಭಾವಿ ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಶೀಘ್ರವೇ ಆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಲೋಕಾಯುಕ್ತ ಎಸ್​ಪಿ ನೊಟೀಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ವಿಚಾರಣೆಗೆ ಬರುವಂತೆ ನೊಟೀಸ್ ನೀಡಲಿದ್ದಾರೆ.

ಇದು ಮುಂದೆ ಆ ಮೂವರು ಸಚಿವರ ಬುಡಕ್ಕೂ ಬರುತ್ತಾ? ಆ ಮೂವರು ಪ್ರಭಾವಿ ಸಚಿವರ್ಯಾರು? ಅವರ ವಿಚಾರಣೆಯೂ ನಡೆಯುತ್ತಾ? ಎಂಬ ಪ್ರಶ್ನೆ ಎದುರಾಗಿದೆ. ಸಿದ್ದು ಸರ್ಕಾರಕ್ಕೆ ಹೊಸ ತಲೆ ನೋವು ಶುರುವಾಗಿದೆ.. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಹೊಸ ಮುಜುಗರಗಳು ಎದುರಾಗುತ್ತಿವೆ.

Comments (0)

Your email address will not be published. Required fields are marked *

Back to top button