ಶುಕ್ರ ಗ್ರಹವು ಇದೇ ಮೇ 19 ರಂದು ತನ್ನ ರಾಶಿಯನ್ನು ಬದಲಾಯಿಸಲಿದ್ದು, ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಈ ಚಲನೆಯಿಂದ ಗುರು ಶುಕ್ರನ ಸಂಯೋಗವಾಗಲಿದ್ದು, ಈ ಸಂಯೋಗವು ಜೂನ್ 13 ರವರೆಗೆ ಇರಲಿದೆ.
ವೃಷಭ ರಾಶಿಯಲ್ಲಿ ಶುಕ್ರ ಸಂಚಾರದಿಂದಾಗಿ ಕೆಲವು ರಾಶಿಯವರ ಅದೃಷ್ಟದ ದಿನಗಳು ಶುರುವಾಗಲಿದೆ. ವೃಷಭ ರಾಶಿಯವರಿಗೆ ಶುಕ್ರನ ಈ ಸಂಚಾರವು ಲಾಭದಾಯಕವಾಗಿರಲಿದೆ. ಆಸ್ತಿಯನ್ನು ಖರೀದಿಸಲು ಈ ಸಮಯ ಉತ್ತಮವಾಗಿದೆ. ನಿಮ್ಮ ವೈವಾಹಿಕ ಜೀವನವು ಪ್ರಣಯದಿಂದ ಕೂಡಿರಲಿದೆ.ನಿಮಗೆ ವಾಹನ ಖರೀದಿಸುವ ಯೋಗವಿದೆ. ನೀವು ಸ್ನೇಹಿತರೊಂದಿಗೂ ಸಹ ಹೆಚ್ಚು ಸಮಯವನ್ನು ಕಳೆಯುತ್ತೀರಿ.