ಆರೋಗ್ಯಸುದ್ದಿ

ಪ್ರತಿ ದಿನ ಸೇಬು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು..?

ದಿನವೂ ಒಂದು ಸೇಬು ತಿನ್ನಿ, ಇದು ವೈದ್ಯರನ್ನು ದೂರವಿರಿಸುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಜನಪ್ರಿಯವಾಗಲು ಹಲವಾರು ಕಾರಣಗಳಿವೆ. ಈ ರುಚಿಕರವಾದ ಹಣ್ಣು ಪೋಷಕಾಂಶಗಳಿಂದ ತುಂಬಿದೆ. ಜೀರ್ಣ ಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದ ವರೆಗೆ ಸೇಬಿನ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಸೇಬು ತಿನ್ನುವುದರಿಂದ ಆಗುವ ಪ್ರಯೋಜನಗಳು ಯಾವುವು ?
ಸೇಬು ಅತ್ಯಂತ ಸುಲಭವಾಗಿ ಲಭ್ಯವಿರುವ ಮತ್ತು ಅತ್ಯಂತ ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿದೆ. ನೀವು ಸೇಬು ಮಾತ್ರ ಸೇವಿಸಬಹುದು ಅಥವಾ ಅದನ್ನು ತುಂಡು ತುಂಡಾಗಿ ಕತ್ತರಿಸಿ ಇತರ ಹಣ್ಣುಗಳೊಂದಿಗೆ ಸಲಾಡ್ ಮಾಡಿ ತಿನ್ನಬಹುದು ಅಥವಾ ಸೇಬುಗಳನ್ನು ಬಳಸಿ ಸಿಹಿ ತಿಂಡಿ ಮಾಡಬಹುದು.

  1. ಸೇಬುಗಳು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ : ಸೇಬುಹಣ್ಣು, ಕರಗುವ ಮತ್ತು ಕರಗದ ನಾರಿನ ಉತ್ತಮ ಮೂಲವಾಗಿದೆ, ಇದುಆರೋಗ್ಯಕರ ಜೀರ್ಣಕ್ರಿಯೆಯನ್ನುಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜೊತೆಗೆ ಮಲಬದ್ಧತೆ ಮತ್ತು ಸಂಬಂಧಿತ ಪರಿಸ್ಥಿತಿಗಳನ್ನು ತಡೆಯುತ್ತದೆ .
  2. ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ :
    ಅಧಿಕ ಕೊಲೆಸ್ಟ್ರಾಲ್ ಮಟ್ಟವು ಯಾರಿಗೂ ಸಂತೋಷ ಇರುವುದಿಲ್ಲ. ಆದರೆ ಸೇಬಿನ ಒಂದು ಆರೋಗ್ಯ ಪ್ರಯೋಜನವೆಂದರೆ, ವಿಶೇಷವಾಗಿ ಕೆಂಪು ಸೇಬು …ಇದು ಕೊಲೆಸ್ಟ್ರಾಲ್ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ . ಅಂದರೆ ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  3. ಸೇಬುಗಳು ಫ್ರೀರಾಡಿಕಲ್ಗಳ ವಿರುದ್ಧ ಹೋರಾಡುತ್ತವೆ :
    ಪೋಷಕಾಂಶ ಭರಿತ ಸೇಬುಗಳಲ್ಲಿ ಕ್ವೆರ್ಸೆಟಿನ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ದೀರ್ಘ ಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  4. ತೂಕನಿರ್ವಹಣೆ
    ಸೇಬುಗಳ ಹೆಚ್ಚಿನ ಫೈಬರ್ ಅಂಶವು ಆಹಾರ ಸೇವನೆಯ ಬಳಿಕ ಸಂತೃಪ್ತಿ ಮೂಡಿಸಲು ಸಹಾಯಮಾಡುತ್ತದೆ. ಹಾಗಾಗಿ ಇದು ಬೊಜ್ಜಿನ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
  5. ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ:
    ನಾವು ಮೂಳೆಯ ಆರೋಗ್ಯದ ಬಗ್ಗೆ ಮಾತನಾಡಿದರೆ, ಹೆಚ್ಚಾಗಿ ಹಾಲು ಮತ್ತು ಡೈರಿ ಉತ್ಪನ್ನಗಳ ಬಗ್ಗೆ ಯೋಚಿಸುತ್ತೇವೆ. ಆದರೆ ಸೇಬುಗಳಲ್ಲಿ ಕಂಡು ಬರುವ ಬೋರಾನ್ನಂತಹ ಕೆಲವು ಸಂಯುಕ್ತಗಳು ಮೂಳೆಗಳನ್ನು ಬಲಪಡಿಸುತ್ತವೆ ಎಂದು ನಂಬಲಾಗಿದೆ.

Comments (0)

Your email address will not be published. Required fields are marked *

Back to top button