ಐಫೋನ್ ಪ್ರಿಯರಿಗೆ ಆ್ಯಪಲ್ ಕಂಪನಿ ಗುಡ್ ನ್ಯೂಸ್ ಕೊಟ್ಟಿದೆ. ಆ್ಯಪಲ್ ಕಂಪನಿಯ ಐಫೋನ್ SE ಸರಣೀಯ SE 4 ನಾಳೆ ಲಾಂಚ್ ಆಗಲಿದೆ.
ಕಳೆದ ವರ್ಷ ಆ್ಯಪಲ್ ಕಂಪನಿ ಐಫೋನ್ 16 ಸರಣಿಯನ್ನು ಪರಿಚಯಿಸಿತ್ತು. ಸದ್ಯ ಮಾರುಕಟ್ಟೆಯಲ್ಲಿ ಮಾರಾಟ ನಡೆಸುತ್ತಿದೆ. ಅನೇಕರು ಹೊಸ ಐಫೋನ್ ಖರೀದಿಸಿ ಖುಷಿಪಟ್ಟಿದ್ದರು. ದುಬಾರಿ ಬೆಲೆಯ ಐಫೋನ್ 16 ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಕಡಿಮೆ ಬಜೆಟ್ ಬೆಲೆಗೆ ಐಫೋನ್ SE4 ಪರಿಚಯಿಸಲು ಆ್ಯಪಲ್ ಕಂಪನಿ ಮುಂದಾಗಿದೆ. ನಾಳೆ ಐಫೋನ್ SE4 ಲಾಂಚ್ ಆಗಲಿದೆ. iPhone SE4 ಕುರಿತು ಹಲವು ಅಪ್ಡೇಟ್ ಹೊರಬಿದ್ದಿದೆ. ಅದರಂತೆ iPhone SE4 ಬೆಲೆ 43.000ರೂ ಇರಬಹುದೆಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ಐಫೋನ್ ಖರಿದಿಸಲು ಗ್ರಾಹಕರು ಸಜ್ಜಾಗಿ ನಿಂತಿದ್ದಾರೆ.