ಜಿಲ್ಲೆ

ಡ್ರಗ್ಸ್​ ಕೇಸ್​​; ಸುಖಾ ಸುಮ್ಮನೆ ನನ್ನ ತೇಜೋವಧೆ ಎಂದ ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ: ಡ್ರಗ್ಸ್​​ ದಂಧೆಯಲ್ಲಿ ನಾನು ಯಾರಿಗೂ ಪ್ರಭಾವ ಬೀರಿಲ್ಲ. ಸುಖಾ ಸುಮ್ಮನೆ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಹೇಳಿಕೆಗೆ ಶಾಸಕ ಅಲ್ಲಮಪ್ರಭು ಪಾಟೀಲ್​ ಕಿಡಿಕಾರಿದ್ದಾರೆ.

ಡ್ರಗ್ಸ್​ ಸಾಗಾಣಿಕೆ ಕೇಸ್​ನಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಲಿಂಗರಾಜ ಕಣ್ಣಿ ಬಂಧನವಾಗಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್​ ಆಪ್ತನಾಗಿದ್ದ ಎಂದು ಹೇಳಲಾಗಿತ್ತು.

ಕಲಬುರಗಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಲ್ಲಮಪ್ರಭು ಪಾಟೀಲ ಡ್ರಗ್ ಸಾಗಣೆ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧಿತನಾದ ಲಿಂಗರಾಜ ಕಣ್ಣಿ ನನ್ನ ಆಪ್ತ ಇದ್ದದ್ದು ನಿಜ. ಮಹಾರಾಷ್ಟ್ರ ಸರ್ಕಾರ ಯಾವುದೇ ತನಿಖೆ ಮಾಡಲಿ. ತಾಕತ್ತಿದ್ರೆ ಕಲಬುರಗಿಯಲ್ಲಿನ ಡ್ರಗ್ಸ್ ಕೇಸ್ ಸಹ ತನಿಖೆ ಮಾಡಲಿ. ನಮ್ಮ ಸರ್ಕಾರಕ್ಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಪತ್ರ ಬರೆಯುತ್ತೇನೆ ಎಂದ್ರು..

ಡ್ರಗ್ಸ್​ ದಂಧೆಯಲ್ಲಿ ನಾನು ಯಾರಿಗೂ ಪ್ರಭಾವ ಬೀರಿಲ್ಲ.ಡ್ರಗ್ಸ್ ದಂಧೆಯಲ್ಲಿ ಯಾರ್ಯಾರು ಇದಾರೆ ಅನ್ನೋದರ ಬಗ್ಗೆ ಸಂಪೂರ್ಣ ತನಿಖೆ ಆಗಲಿ, ಸುಖಾ ಸುಮ್ಮನೆ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಹೇಳಿಕೆಗೆ ಕೈ ಶಾಸಕ ಗರಂ ಆದ್ರು. ನನಗೆ ತಾಕತ್ತಿದೆ ಅನ್ನೋ ಕಾರಣಕ್ಕೆ ದತ್ತಾತ್ರೇಯ ಪಾಟೀಲ ಅವರನ್ನು 24 ಸಾವಿರ ಮತಗಳಿಂದ ಸೋಲಿಸಿರುವೆ. ನಮ್ಮ ಸರ್ಕಾರ ಬಂದ ಮೇಲೆ ಡ್ರಗ್ಸ್ ಪ್ರಕರಣಗಳಿಗೆ ಬ್ರೇಕ್ ಹಾಕಲಾಗಿದೆ ಎಂದರು.

Comments (0)

Your email address will not be published. Required fields are marked *

Back to top button