ಹುಬ್ಬಳ್ಳಿ: ಬಾಲಕಿ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಹುಬ್ಬಳ್ಳಿಯ ಶಿಮ್ಲಾ ನಗರದಲ್ಲಿ ನಡೆದಿದೆ.
ರಸ್ತೆಯಲ್ಲಿ ಹೊರಟಿದ್ದ ಬಾಲಕಿ ಮೇಲೆ ಏಕಾಏಕಿ ಎರಡು ನಾಯಿಗಳು ದಾಳಿ ಮಾಡಿದೆ. ಬಾಲಕಿ ಕಿರುಚಿಕೊಂಡರೂ ಬಿಡಿದ ನಾಯಿಗಳು ಬಾಲಕಿಯನ್ನು ಎಳೆದೊಯ್ದು ಕಾಲು, ಮೈಗೆ ಮನಬಂದಂತೆ ಕಚ್ಚಿ ಗಾಸಿಗೊಳಿಸಿವೆ. ಕೊನೆಗೆ ಬಾಲಕಿ ಕಿರುಚಾಟದಿಂದ ಬೆದರಿದ ನಾಯಿಗಳು ಬಾಲಕಿಯನ್ನು ಬಿಟ್ಟು ಹೋಗಿವೆ.
ಬಾಲಕಿಯ ಮೇಲೆ ನಾಯಿಗಳು ಅಟ್ಯಾಕ್ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಬ್ಬಳ್ಳಿ- ಧಾರವಾಡ ಮಾಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗುವಂತೆ ಆಗ್ರಹಿಸಿದ್ದಾರೆ. ಸದ್ಯ ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.


