Saturday, January 31, 2026
26.9 C
Bengaluru
Google search engine
LIVE
ಮನೆಕ್ರಿಕೆಟ್ಸುತ್ತೂರು ಮಠಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಸುತ್ತೂರು ಮಠಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಮೈಸೂರು ; ಮೈಸೂರು ಎಕ್ಸ್ ಪ್ರೆಸ್ ಎಂದು ಗುರುತಿಸಿಕೊಂಡಿದ್ದ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಜಾವಗಲ್ ಶ್ರೀನಾಥ್ ಅವರು ಇಂದು ತಮ್ಮ ಕುಟುಂಬದೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಶ್ರೀನಾಥ್ ಅವರು ತಮ್ಮ ಪತ್ನಿಯೊಂದಿಗೆ ಸ್ವಾಮೀಜಿಯವರ ಸಮ್ಮುಖ ಸ್ವಲ್ಪ ಕಾಲ ಕಳೆದರು. ಈ ಸಂದರ್ಭದಲ್ಲಿ ಪ್ರಾಯಶಃ ಮಠದ ಆಡಳಿತಾಧಿಕಾರಿಯೊಬ್ಬರು ಒಂದು ಕಿರುಹೊತ್ತಿಗೆಯನ್ನು ಮಾಜಿ ಕ್ರಿಕೆಟಿಗನಿಗೆ ನೀಡಿದರು.

ವಿಶ್ವವಿಖ್ಯಾತ ಬ್ಯಾಟರ್ ಗುಂಡಪ್ಪ ವಿಶ್ವನಾಥ್ ಅವರ ಶೋಧವಾಗಿದ್ದ ಶ್ರೀನಾಥ್ 1991 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ 2003 ರವರೆಗೆ ಭಾರತವನ್ನು ಪ್ರತಿನಿಧಿಸಿದರು. ಅಂಕಿ ಅಂಶಗಳಲ್ಲಿ ಅಭಿರುಚಿ ಇರುವರಿಗೆ ಮಾಹಿತಿ ನೀಡೋದಾದರೆ, 67 ಟೆಸ್ಟ್ ಪಂದ್ಯಗಳನ್ನಾಡಿದ ಅವರು 232 ವಿಕೆಟ್ ಪಡೆದರು ಮತ್ತು 229 ಒಂದು ದಿನದ ಪಂದ್ಯಗಳಲ್ಲಿ 315 ವಿಕೆಟ್ ಕಬಳಿಸಿದರು. ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಐಸಿಸಿ ಅವರನ್ನು ಮ್ಯಾಚ್ ರೆಫರಿಯಾಗಿ ನೇಮಕ ಮಾಡಿತ್ತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments