Tuesday, January 27, 2026
18.4 C
Bengaluru
Google search engine
LIVE
ಮನೆಜ್ಯೋತಿಷ್ಯAstrology | ಜ್ಯೋತಿಷ್ಯದಲ್ಲಿ ಕರ್ಮಕಾರಕ ಗ್ರಹ ಶನಿ ಮತ್ತು ಧರ್ಮಕಾರಕ ಗ್ರಹ ಗುರು

Astrology | ಜ್ಯೋತಿಷ್ಯದಲ್ಲಿ ಕರ್ಮಕಾರಕ ಗ್ರಹ ಶನಿ ಮತ್ತು ಧರ್ಮಕಾರಕ ಗ್ರಹ ಗುರು

ಭಚಕ್ರದ ಪ್ರಕಾರ 9ನೇ ಮನೆ ಧನಸ್ಸುರಾಶಿ ಆಗಿದ್ದು ಇದರ ಅಧಿಪತಿ ಗುರು. ಹತ್ತನೇ ಮನೆ ಮಕರ ರಾಶಿ ಆಗಿದ್ದು ಅದರ ಅಧಿಪತಿ ಶನಿ. ಒಂಬತ್ತನೇ ಮನೆಯನ್ನು ಧರ್ಮ ಎಂದು, ಹತ್ತನೇ ಮನೆಯನ್ನು ಕರ್ಮ ಎಂದು ಕರೆಯಲಾಗುತ್ತದೆ. ಆದ್ದರಿಂದ ಗುರು ಧರ್ಮಕಾರಕ, ಶನಿ ಕರ್ಮ ಕಾರಕ… ಕಾಲಪುರುಷ ಅಂಗಗಳಲ್ಲಿ ಧನಸ್ಸು ರಾಶಿಯು ತೊಡೆ, ಮಕರ ರಾಶಿಯ ಮೊಣಕಾಲುಗಳನ್ನು, ಕುಂಭ ರಾಶಿಯ ಮುಂಗಾಲನ್ನು, ಮತ್ತು ಮೀನ ರಾಶಿಯ ಪಾದಗಳನ್ನು ಸೂಚಿಸುತ್ತದೆ..

ಕಾಲುಗಳಿಲ್ಲದೆ ಯಾರು ನಡೆಯಲು ಸಾಧ್ಯವಿಲ್ಲ..!
ಜೀವನದ ಹಾದಿಯಲ್ಲಿ ನಡೆಯಲು ಕಾಲುಗಳು ಹೆಚ್ಚು ಮುಖ್ಯ…

ಗುರು ಮತ್ತು ಶನಿ
ಮಾನವ ಜೀವನದಲ್ಲಿ ಕಾಲುಗಳ ಪಾತ್ರವನ್ನು ವಹಿಸುತ್ತದೆ. ಧರ್ಮ ಮತ್ತು ಕರ್ಮ ಎರಡು ಮನುಷ್ಯರ ಎರಡು ಕಾಲುಗಳಿದ್ದಂತೆ, ಜೀವನದ ಹಾದಿಯನ್ನು ತುಳಿಯಲು ಎರಡು ಕಾಲುಗಳು ಅತ್ಯಗತ್ಯ. ಇಬ್ಬರು ಯಾವಾಗಲೂ ಒಬ್ಬರನ್ನೊಬ್ಬರು ಸಮತೋಲನಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ . ಇವೆರಡು ಸಮತೋಲಿತವಾಗಿದ್ದರೆ ಜೀವನ ಸುಖಮಯವಾಗಿ ಸಾಗುತ್ತದೆ. ಅಸಮತೋಲನ ಇದ್ದಾಗ ಜೀವನ ಕಠಿಣವಾಗುತ್ತದೆ.

ಶನಿ ಮತ್ತು ಗುರು ಯಾವುದೇ ರೀತಿಯಲ್ಲಿ ಜಾತಕದಲ್ಲಿ ಸೇರಿಕೊಂಡಾಗ ಜೀವನ ಸುಗಮವಾಗಿ ಚಲಿಸುತ್ತದೆ.
ಇಲ್ಲದಿದ್ದರೆ ಜೀವನದಲ್ಲಿ ಅಸಮತೋಲನ ಉಂಟಾಗುತ್ತದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments