ಆನೇಕಲ್ : ರಸ್ತೆ ಮಧ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ ಹಾಗೂ ಬೈಕ್ ಟಚ್ ಆಗಿದೆ ಎಂಬ ನೆಪವೊಡ್ಡಿ ಹಲ್ಲೆಗೆ ಮುಂದಾದ ಘಟನೆ ಭಾನುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ತಿಬೆಲೆ – ಸರ್ಜಾಪುರ ರಸ್ತೆ ಯಲ್ಲಿ ಚರಣ್ ಪಾಲ್‌ಸಿಂಗ್ ಎಂಬ ಉತ್ತರ ಭಾರತ ಮೂಲದ ವ್ಯಕ್ತಿ ಸರ್ಜಾಪುರ ಸಮೀಪದ ಕೋಟಗಾನಹಳ್ಳಿ ಗ್ರಾಮದ ಬಳಿ ವಾಸವಿದ್ದು, ಕೆಲಸಕ್ಕೆ ಎಂದು ಅತ್ತಿಬೆಲೆ ಕಡೆ ಹೋಗಿ ವಾಪಸ್ ಬರುತ್ತಿದ್ದ ವೇಳೆಯಲ್ಲಿ ಕಾರ್ ಟಚ್ ಆಗಿದೆ ಎಂಬ ನೆಪ ಹೇಳಿ ಏಕಾಏಕಿ ನಾಲ್ಕೈದು ವಾಹನಗಳಲ್ಲಿ ಪುಂಡರು ಕಾರನ್ನು ಅಡ್ಡ ಹಾಕಿದ್ದಾರೆ ಇದರಿಂಧಾಗಿ ಭಯಬೀತಗೊಂಡ ಚರಣ್ ಪಾಲ್‌ಸಿಂಗ್ ಅವರಿಂದ ತಪ್ಪಿಸಿಕೊಳ್ಳಲು ಕಾರನ್ನು ದ್ವಿಚಕ್ರ ವಾಹನದ ಮೇಲೆ ಕಾರನ್ನು ಹತ್ತಿಸಿಕೊಂಡು ನೇರವಾಗಿ ಸರ್ಜಾಪುರ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದಾರೆ. ಘಟನೆಯು ಸಂಪೂರ್ಣವಾಗಿ ಕಾರಿನ ಕೆಮರಾದಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರರಣ ದಾಖಲಾಗುತಿದಂತೆ ಸರ್ಜಾಪುರ ಹೋಲಿಸರು ಮೂರು ಮಂದಿ ಪುಂಡರನ್ನು ವಶಕ್ಕೆ ಪಡೆದಿದ್ದು, ಹೇಮಂತ್, ಪ್ರಜ್ವಲ್, ಗೌತಮ, ಬಂದಿತ ಆರೋಪಿಗಳಾಗಿದ್ದು ಪ್ರಕರಣ ಸಂಬಂಧ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಬೆಂಗಳೂರು ಸುರಕ್ಷಿತವಲ್ಲ : ಚರಣ್ ಪಾಲ್ ಸಿಂಗ್ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಯಾವುದೇ ಅಪಘಾತ ಸಂಭವಿಸಿಲ್ಲ. ಇದು ಕೇವಲ ಸುಲಿಗೆ ಮತ್ತು ಕಿರುಕುಳ ಪ್ರಕರಣವಾಗಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡದ್ದೇವೆ ಈ ಯುವಕರು ತಾವು ಕುಡಿದಿರುವುದಾಗಿ ಮತ್ತು ಸಂಚಾರ ನಿಯಮ ಉಲ್ಲಂಘಿಸಿದ್ದಾರೆಂದು ಒಪ್ಪಿಕೊಂಡಿದ್ದು ಬೆಂಗಳೂರಿನಲ್ಲಿ ನಾವು ಸುರಕ್ಷಿತವಾಗಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.