ಯಾದಗಿರಿ: ಶಸ್ತ್ರ ಚಿಕಿತ್ಸೆ ಇಲ್ಲದೇ 5 ವರ್ಷದ ಮಗುವಿನ ಗಂಟಲಿನಲ್ಲಿದ್ದ ಪ್ಲಾಸ್ಟಿಕ್ ಕ್ಲಿಪ್ ಅನ್ನು ವೈದ್ಯರು ಹೊರ ತೆಗೆದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಗೆಡ್ಡಸೂಗುರು ಗ್ರಾಮದ ಸಾಹೇಬರೆಡ್ಡಿ ಎಂಬುವವರ 5 ವರ್ಷದ ಮಗ ಆಕಾಶ್ ಸೀರೆಗೆ ಹಾಕುವ ಪ್ಲಾಸ್ಟಿಕ್ ಕ್ಲಿಪ್ ನುಂಗಿದ್ದು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಟದ ಸಮಸ್ಯೆ ಎದುರಿಸುತ್ತಾನೆ. ಕೂಡಲೇ ಕುಟುಂಬಸ್ಥರು ನಾಯ್ಕೋಡಿ ಆಸ್ಪತ್ರೆಗೆ ದಾಖಲಿಸಿದ್ದು, ಕಿವಿ ಮೂಗು ಗಂಟಲು ರೊಗ ತಜ್ಞ ಡಾ. ರಾಹುಲ್. ಎಸ್ ನಾಯ್ಕೋಡಿ ನೇತೃತ್ವದಲ್ಲಿ ವೈದ್ಯರು ತಂಡ ಶಸ್ತ್ರ ಚಿಕಿತ್ಸೆ ಇಲ್ಲದೇ ಸ್ಕೋಪಿ ಮೂಲಕ ಪ್ಲಾಸ್ಟಿಕ್ ಕ್ಲಿಪ್ ಅನ್ನು ಯಶಸ್ವಿಯಾಗಿ ಹೊರ ತೆಗೆದು ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು ಪಾಲಕರು ಚಿಕ್ಕ ಮಕ್ಕಳ ಕೈಗೆ ಸಣ್ಣಪುಟ್ಟ ವಸ್ತುಗಳನ್ನು ಕೊಡಬಾರದು ಮಕ್ಕಳ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಾಗ ಮಗುವಿನ ಪ್ರಾಣ ಹೋಗುವ ಸಂಭವ ಇರುತ್ತದೆ ಆದ್ದರಿಂದ ಪಾಲಕರು ಜಾಗೃತಿವಹಿಸಿ ಎಂದು ವೈದ್ಯರು ಸೂಚಿಸಿದ್ರು..


