Wednesday, August 20, 2025
18.9 C
Bengaluru
Google search engine
LIVE
ಮನೆಜ್ಯೋತಿಷ್ಯ72 ವರ್ಷಗಳ ಬಳಿಕ ಮತ್ತೆ ಬಂತು ಈ ಯೋಗ

72 ವರ್ಷಗಳ ಬಳಿಕ ಮತ್ತೆ ಬಂತು ಈ ಯೋಗ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬರೋಬ್ಬರಿ 72 ವರ್ಷದ ಬಳಿಕ ಅಪರೂಪದ ಯೋಗವೊಂದು 3 ರಾಶಿಯವರಿಗೆ ಕೂಡಿ ಬಂದಿದೆ. ಶನಿ, ಬುಧ ಹಾಗೇ ರಾಹು ಮತ್ತು ಕೇತು ಗ್ರಹಗಳು ಹಿಮ್ಮೆಟ್ಟುತ್ತಿವೆ. ಈ ಅವಧಿಯಲ್ಲಿ 3 ರಾಶಿಯವರಿಗೆ ಅತ್ಯಂತ ಶುಭ ಫಲ ಕೂಡಿಬಂದಿದೆ.. ಜುಲೈ 13ರಿಂದ ಈ ಮೂರು ರಾಶಿಯವರಿಗೆ ಉದ್ಯೋಗ, ವ್ಯವಹಾರ, ಮತ್ತು ಆರ್ಥಿಕ ಪ್ರಗತಿಯ ಹೊಸ ಬಾಗಿಲು ತೆರೆಯುತ್ತಿದೆ..

ಕರ್ಕಾಟಕ ರಾಶಿಯವರಿಗೆ ಜುಲೈ 13ರಬಳಿಕ ತುಂಬಾ ಶುಭಕರವಾಗಿರುತ್ತದೆ. ವಿವಾಹಿತರು ತಮ್ಮ ವೈವಾಹಿಕ ಜೀವನದಲ್ಲಿ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಅವಿವಾಹಿತರು ವಿವಾಹ ಪ್ರಸ್ತಾಪಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ, ನೀವು ಸಾಮಾಜಿಕ ಮತ್ತು ವೃತ್ತಿಪರ ಮಟ್ಟದಲ್ಲಿ ಪ್ರತಿಷ್ಠೆಯನ್ನು ಪಡೆಯುತ್ತೀರಿ. ಇದರ ಜೊತೆಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಖರ್ಚುಗಳನ್ನು ನಿಯಂತ್ರಿಸುವ ಮೂಲಕ ನೀವು ಉಳಿತಾಯವನ್ನು ಹೆಚ್ಚಿಸಬಹುದು.

ಇನ್ನು ವೃಷಭ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ಆದಾಯ ಹೆಚ್ಚಾಗುತ್ತದೆ ಮತ್ತು ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುತ್ತದೆ. ಹಳೆಯ ವಿವಾದಗಳು ಬಗೆಹರಿಯುತ್ತವೆ. ವ್ಯಾಪಾರ ಪಾಲುದಾರಿಕೆಯಲ್ಲಿ ಲಾಭವಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ ಮತ್ತು ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ, ನಿಮ್ಮ ಕುಟುಂಬ ಮತ್ತು ಆಪ್ತರನ್ನು ಸಂತೋಷವಾಗಿಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಹೊಸ ಹೂಡಿಕೆಗಳನ್ನು ಮಾಡಲು ಸಮಯ ಸರಿಯಾಗಿರುತ್ತದೆ.

ಮೀನ ರಾಶಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಲಿದೆ. ಹಳೆಯ ಸಾಲಗಳನ್ನು ತೀರಿಸಲು ನಿಮಗೆ ಅವಕಾಶ ಸಿಗುತ್ತದೆ. ಹೊಸ ವ್ಯವಹಾರ ಪ್ರಾರಂಭಿಸಲು ಇದು ಸರಿಯಾದ ಸಮಯ. ಪ್ರೇಮ ಸಂಬಂಧಗಳು ಸಿಹಿಯಾಗಿರುತ್ತವೆ ಮತ್ತು ಮದುವೆಯ ಪ್ರಸ್ತಾಪಗಳು ಬರುವ ಸಾಧ್ಯತೆಯಿದೆ. ವ್ಯವಹಾರವು ವಿಸ್ತಸಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗಗಳು ಸಿಗುತ್ತವೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಮತ್ತು ಹೊಸ ಜವಾಬ್ದಾರಿಗಳು ಸಿಗಬಹುದು.

ನಾಲ್ಕು ಗ್ರಹಗಳು ಏಕಕಾಲದಲ್ಲಿ ಹಿಮ್ಮುಖವಾಗಿ ಚಲಿಸುವ ಅಪರೂಪದ ಸಂಯೋಜನೆ ಇದಾಗಿರೋದೆ. ಹೀಗಾಗಿ ಕಟಕ, ವೃಷಭ ಮತ್ತು ಮೀನ ರಾಶಿಯವರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಈ ರಾಶಿಗಳ ಜನರು ಈ ಸಮಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಮತ್ತು ತಮ್ಮ ಜೀವನದಲ್ಲಿ ಸ್ಥಿರತೆ ಮತ್ತು ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments