ದೇಶ/ವಿದೇಶಸುದ್ದಿ

20 ವರ್ಷಗಳ ಟ್ವಿಟ್ಟರ್ ಪಯಣ – ಮೊದಲ ಟ್ವೀಟ್ ಹೀಗಿತ್ತು!

ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ. ಅಂದರೆ 2006ರ ಮಾರ್ಚ್ 22ರಂದು ಟ್ವಿಟರ್ ಜನ್ಮ ತಳೆದಿತ್ತು. 20 ವರ್ಷಗಳಲ್ಲಿ ಟ್ವಿಟರ್ ನಾನಾ ರೀತಿಯ ಬೆಳವಣಿಗೆ ಕಂಡಿದೆ. ಮಾಲೀಕರ ಬದಲಾವಣೆ ಆಗಿದೆ. ಇದೀಗ ಟ್ವಿಟರ್‌ಗೆ ಮಸ್ಕ್ ಮಾಲೀಕರಾಗಿದ್ದಾರೆ.


ಟ್ವಿಟರ್ ವೇದಿಕೆ ಅಸ್ತಿತ್ವಕ್ಕೆ ಬಂದು ಹಾಗೂ ಮೊದಲ ಟ್ವಿಟ್ ಪೋಸ್ಟ್ ಆಗಿ ನಿನ್ನೆ ಮಾರ್ಚ್ 22ಕ್ಕೆ 20 ವರ್ಷ ಗತಿಸಿತು! ಹೌದು, ಅಮೆರಿಕದ ಟೆಕಿ ಜಾಕ್ ಡೊರ್ಸಿ ಹಾಗೂ ಅವರ ತಂಡ 2006ರಲ್ಲಿ ಟ್ವಿಟರ್ ಎಂಬ ಆನ್‌ಲೈನ್ ಮೈಕ್ರೋ ಬ್ಲಾಗಿಂಗ್ ವೇದಿಕೆಯನ್ನು ನಿರ್ಮಾಣ ಮಾಡಿತು.
ಸದ್ಯ ಟ್ವಿಟರ್‌ಗೆ ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಮಾಲೀಕರಾಗಿದ್ದು, ಟ್ವಿಟರ್ ಹೆಸರನ್ನು ಬದಲಿಸಿ ‘X’ ಎಂದು ಮರುನಾಮಕರಣ ಮಾಡಿದ್ದಾರೆ. ಆದರೂ ಈಗಲೂ ಈ ಜನಪ್ರಿಯ ಸಾಮಾಜಿಕ ಜಾಲತಾಣದ ವೇದಿಕೆಯನ್ನು ಜನ ಅದನ್ನು ಟ್ವಿಟರ್ ಎಂದೇ ಕರೆಯುತ್ತಾರೆ.
2022ರಲ್ಲಿ ಜಾಕ್ ಡೊರ್ಸಿ ಅವರಿಂದ ಟ್ವಿಟರ್ ವೇದಿಕೆಯನ್ನು ಅಮೆರಿಕ ಉದ್ಯಮಿ ಎಲಾನ್ ಮಸ್ಕ್ ಅವರು ಸುಮಾರು 73 ಲಕ್ಷ ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿ ಮತ್ತಷ್ಟು ಬದಲಾವಣೆಗಳನ್ನು ಮಾಡಿದ್ದಾರೆ.

ಆಗ ಜಾಕ್ ಡೋರ್ಸಿ ಅವರು ಅಂದುಕೊಂಡತೆ ತಮ್ಮ ವೇದಿಕೆಯನ್ನು ನೆಟ್ಟಿಗರಿಗೆ ಮುಕ್ತಗೊಳಿಸಿ 2006ರ ಮಾರ್ಚ್ 22 ಭಾರತೀಯ ಕಾಲಮಾನ ಬೆಳಗ್ಗೆ 2 ಕ್ಕೆ ‘just setting up my twttr’ ಎಂದು ಟ್ವಿಟ್ ಒಂದನ್ನು ಮಾಡಿದ್ದರು.
ಈಗ ಪುನಃ ಆ ಟ್ವಿಟ್ ಅನ್ನು ರಿಶೇರ್ ಮಾಡಿಕೊಂಡಿರುವ ಜಾಕ್, five words. 20 years. unfinished’ ಎಂದು ಪೋಸ್ಟ್ ಮಾಡಿ ಸ್ಮರಿಸಿಕೊಂಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಟ್ವಿಟರ್ ಸಾಕಷ್ಟು ಬದಲಾವಣೆಯಾಗಿದ್ದು ಮೈಕ್ರೋ ಬ್ಲಾಗಿಂಗ್ ಸೈಟ್‌ಗಳಲ್ಲಿ ಇಂದಿಗೂ ನಂಬ‌ರ್ ಒನ್ ಸ್ಥಾನದಲ್ಲಿದೆ. ಸದ್ಯ ಈ ತಾಣದ ಒಟ್ಟು ಬಳಕೆದಾರರು 60.1 ಕೋಟಿ.

Comments (0)

Your email address will not be published. Required fields are marked *

Back to top button