Wednesday, February 11, 2026
26.6 C
Bengaluru
Google search engine
LIVE
ಮನೆಜಿಲ್ಲೆತಾಯಿ-ದೊಡ್ಡಮ್ಮನ ಖಾಸಗಿ ಫೋಟೋ ಪ್ರಿಯಕರನಿಗೆ ಕಳಿಸಿದ ಯುವತಿ!

ತಾಯಿ-ದೊಡ್ಡಮ್ಮನ ಖಾಸಗಿ ಫೋಟೋ ಪ್ರಿಯಕರನಿಗೆ ಕಳಿಸಿದ ಯುವತಿ!

ಬೆಂಗಳೂರು: ತಾಯಿ ಮತ್ತು ಮಗಳ ಸಂಬಂಧ ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ ವ್ಯಸನದಿಂದಾಗಿ ಬಿರುಕು ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಓದುವ ನೆಪದಲ್ಲಿ ಪೋಷಕರಿಂದ ಮೊಬೈಲ್ ಪಡೆದ 22 ವರ್ಷದ ಯುವತಿಯೊಬ್ಬಳು, ತನ್ನ ತಾಯಿ ಮತ್ತು ದೊಡ್ಡಮ್ಮನ ಖಾಸಗಿ ಫೋಟೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸ್ವತಃ ತಾಯಿಯೇ ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ಒಂದು ತಿಂಗಳಿನಿಂದ ಅಪರಿಚಿತ ಯುವಕನೊಂದಿಗೆ ಸಂಪರ್ಕದಲ್ಲಿದ್ದಳು. ಈ ವಿಷಯ ಪೋಷಕರಿಗೆ ತಿಳಿದಾಗ ಆಕೆಯನ್ನು ಎಚ್ಚರಿಸಲಾಗಿತ್ತು. ಆದರೆ, ಓದಿನ ಕಾರಣ ನೀಡಿ ಪೋಷಕರ ಬಳಿ ಮೊಬೈಲ್ ಪಡೆದಿದ್ದ ಈಕೆ, ಮನೆಯವರು ಮಲಗಿದ್ದಾಗ ಅವರ ಖಾಸಗಿ ಫೋಟೋಗಳನ್ನು ತೆಗೆದಿದ್ದಾಳೆ. ಅಷ್ಟೇ ಅಲ್ಲದೆ, ಆ ಫೋಟೋಗಳನ್ನು ತನ್ನ ಪ್ರಿಯಕರನಿಗೆ ರವಾನಿಸಿದ್ದಾಳೆ. ಇತ್ತೀಚೆಗೆ ತಾಯಿಯು ಮಗಳ ಮೊಬೈಲ್ ಪಾಸ್‌ವರ್ಡ್ ಪಡೆದು ಪರಿಶೀಲಿಸಿದಾಗ ಕೃತ್ಯ ಬಯಲಾಗಿದೆ.

ಮಗಳ ಈ ವರ್ತನೆಯಿಂದ ಆಘಾತಕ್ಕೊಳಗಾದ ಪೋಷಕರು ಈ ಬಗ್ಗೆ ಪ್ರಶ್ನಿಸಿದಾಗ, ಆಕೆ ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ . ಕೂಡಲೇ ಎಚ್ಚೆತ್ತ ತಾಯಿಯು ಮಗಳ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿಸಿ, ಮಗಳು ಹಾದಿ ತಪ್ಪುತ್ತಿರುವುದನ್ನು ಕಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸದ್ಯ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments