ಜಿಲ್ಲೆ

ಕಾಲ ಕೂಡಿ ಬಂದಾಗ ನಾನೂ ಸಚಿವನಾಗುತ್ತೇನೆ; ಎನ್.ಎಚ್.ಕೋನರೆಡ್ಡಿ

ಧಾರವಾಡ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸದ್ಯಕ್ಕೆ ಏನೂ ಮಾತನಾಡದಂತೆ ಎಲ್ಲ ಶಾಸಕರಿಗೆ ನಮ್ಮ ಹೈಕಮಾಂಡ್ ಸೂಚನೆ ಕೊಟ್ಟಿದ್ದಾರೆ. ಅದೇ ರೀತಿ ನಾವೂ ಕೂಡ ಸಿಎಂ ಹಾಗೂ ಡಿಸಿಎಂ ಅವರ ಸೂಚನೆ ಪಾಲನೆ ಮಾಡುತ್ತೇವೆ. ಕಾಲ ಕೂಡಿ ಬಂದಾಗ ನಾನೂ ಸಚಿವನಾಗುತ್ತೇನೆ ಎಂದು ಸೋಮವಾರ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು ಸಚಿವ ಸ್ಥಾನ ಕೊಡುತ್ತೇವೆ ಎಂದರೆ ಯಾರೂ ಬೇಡ ಎನ್ನುವುದಿಲ್ಲ. ನಾನು ಸಚಿವನಾದರೆ ಕೆಲಸ ಮಾಡಿಸಿ ತೋರಿಸುತ್ತೇನೆ. ಸದ್ಯಕ್ಕೆ ಆ ವಿಷಯ ಬೇರೆ. ಈಗಂತೂ ಸಿಎಂ ಹಾಗೂ ಡಿಸಿಎಂ ಅವರ ನಿರ್ದೇಶನ ಏನಿದೆಯೋ ಅದನ್ನು ಪಾಲನೆ ಮಾಡುತ್ತೇವೆ.

ದಲಿತ ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಡಿಸಿಎಂ ಅವರೇ ಈ ಮೊದಲು ಸಿಎಂ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ ಎಂದಿದ್ದಾರೆ. ಈ ಬಗ್ಗೆ ಯಾರೂ ಏನನ್ನೂ ಮಾತನಾಡಬೇಡಿ ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂದ್ರು.

Comments (0)

Your email address will not be published. Required fields are marked *

Back to top button