ಜಿಲ್ಲೆಸುದ್ದಿ

ಕ್ಯಾಮರಾ ಆರ್ಡರ್ ಮಾಡಿದ ಉದ್ಯಮಿಗೆ ಬಾಕ್ಸ್ ತೆರೆದಾಗ ಕಂಡಿದ್ದು ವಾಷಿಂಗ್ ಪೌಡರ್!

ಹುಬ್ಬಳ್ಳಿ: ದುಬೈ ಮೂಲದ ಉದ್ಯಮಿಯೊಬ್ಬರು ಅಮೆಜಾನ್‌ನಲ್ಲಿ ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮರಾ ಆರ್ಡರ್ ಮಾಡಿದ್ದುಕ್ಯಾಮೆರಾ ಬದಲಿಗೆ ವಾಷಿಂಗ್ ಪೌಡರ್ ಪ್ಯಾಕೆಟ್‌ಗಳು ಮನೆ ಸೇರಿವೆ. ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಉದ್ಯಮಿ ಅಲ್ಫ್ರೆಡ್ ಅವರು ತಮ್ಮ ಸ್ನೇಹಿತರಾದ ವೈದ್ಯರೊಬ್ಬರಿಗೆ ಉಡುಗೊರೆ ನೀಡಲು ಅಮೆಜಾನ್‌ನಲ್ಲಿ 60,990 ರೂಪಾಯಿ ಬೆಲೆಯ ದುಬಾರಿ ಕ್ಯಾಮರಾವನ್ನು ಬುಕ್ ಮಾಡಿದ್ದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್ ವಿಳಾಸಕ್ಕೆ ಈ ಕೊರಿಯರ್ ಬಂದಿತ್ತು.

ಕ್ಯಾಮರಾ ಬಾಕ್ಸ್ ಕೈ ಸೇರಿದಾಗ ಸಂಶಯಗೊಂಡ ಅಲ್ಫ್ರೆಡ್, ಮುನ್ನೆಚ್ಚರಿಕೆ ಕ್ರಮವಾಗಿ ಬಾಕ್ಸ್ ತೆರೆಯುವ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದರು. ಬಾಕ್ಸ್ ಬಿಚ್ಚಿದಾಗ ಒಳಗಡೆ ಕ್ಯಾಮರಾ ಬದಲಿಗೆ ಎರಡು ವಾಷಿಂಗ್ ಪೌಡರ್ ಪ್ಯಾಕೆಟ್‌ಗಳು ಇರುವುದನ್ನು ಕಂಡು ಅವರು ಬೆಚ್ಚಿಬಿದ್ದಿದ್ದಾರೆ. ದುಬಾರಿ ಬೆಲೆಯ ಕ್ಯಾಮರಾ ಮಾಯವಾಗಿ ಅದರ ಜಾಗದಲ್ಲಿ ಡಿಟರ್ಜೆಂಟ್ ಪುಡಿ ಇರುವುದು ಆನ್‌ಲೈನ್ ವಂಚನೆಯ ಜಾಲ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ವಂಚನೆಯ ಬಗ್ಗೆ ಅಲ್ಫ್ರೆಡ್ ಅವರು ಸಂಬಂಧಪಟ್ಟವರಿಗೆ ದೂರು ನೀಡಿದರೂ ಸಹ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಅವರ ಬಳಿ ಬಾಕ್ಸ್ ಓಪನ್ ಮಾಡುವಾಗ ಚಿತ್ರೀಕರಿಸಿದ ವಿಡಿಯೋ ಸಾಕ್ಷಿ ಇರುವುದರಿಂದ ವಂಚನೆಯನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ. ಈ ಘಟನೆಯು ಆನ್‌ಲೈನ್‌ನಲ್ಲಿ ದುಬಾರಿ ವಸ್ತುಗಳನ್ನು ಆರ್ಡರ್ ಮಾಡುವ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ.

Comments (0)

Your email address will not be published. Required fields are marked *

Back to top button