Wednesday, February 11, 2026
25.7 C
Bengaluru
Google search engine
LIVE
ಮನೆ#Exclusive NewsTop Newsಪ್ರೀತಿ ನಿರಾಕರಿಸಿದ ಶಿಕ್ಷಕಿಗೆ ಮಾಡಿದ್ದೇನು? ಗುರುವಿಗೇ ಮೃತ್ಯುಪಾಶವಾದ ಶಿಷ್ಯ

ಪ್ರೀತಿ ನಿರಾಕರಿಸಿದ ಶಿಕ್ಷಕಿಗೆ ಮಾಡಿದ್ದೇನು? ಗುರುವಿಗೇ ಮೃತ್ಯುಪಾಶವಾದ ಶಿಷ್ಯ

ಉತ್ತರ ಪ್ರದೇಶ: ಮೈನ್‌ಪುರಿಯಲ್ಲಿ ವಿದ್ಯಾರ್ಥಿಯೊಬ್ಬನ ವಿಕೃತ ವರ್ತನೆಗೆ ಶಿಕ್ಷಕಿಯೊಬ್ಬರು ಬಲಿಯಾಗಿರುವ ಭೀಕರ ಘಟನೆ ನಡೆದಿದೆ.

12ನೇ ತರಗತಿ ವಿದ್ಯಾರ್ಥಿ ಅಖಂಡ್ ಪ್ರತಾಪ್ ಸಿಂಗ್, ತನ್ನ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸಿ, ಆಕೆಯ ತುಟಿಗಳನ್ನು ಕಚ್ಚಿ ತುಂಡರಿಸಿದ್ದಾನೆ.

ವಿದ್ಯಾರ್ಥಿಯ ಸತತ ಕಿರುಕುಳದಿಂದ ಬೇಸತ್ತ ಶಿಕ್ಷಕಿ ಈ ಹಿಂದೆ ಕೆಲಸ ಮಾಡುತ್ತಿದ್ದ ಕಾಲೇಜನ್ನೇ ಬಿಟ್ಟು ಬೇರೆಡೆ ಸೇರಿದ್ದರು. ಆದರೂ ಬಿಡದ ಕಾಮುಕ ವಿದ್ಯಾರ್ಥಿ, ಆಕೆ ಹೊಸ ಕಾಲೇಜಿಗೆ ಹೋಗುವ ದಾರಿಯಲ್ಲಿ ಅಡ್ಡಗಟ್ಟಿ ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಶಿಕ್ಷಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾಕ್ಕೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments