ನೀವು ನಕ್ಷತ್ರದಂತೆ ಫಳ ಫಳನೆ ಹೊಳೆಯಬೇಕು. ಹಾಲಿನಂತೆ ನಿಮ್ಮ ತ್ವಚೆ ಬೆಳ್ಳಗೆ ಆಗಬೇಕಾ..? ಜಾಮುನಿನಂತೆ ಮೃದು ಆಗಬೇಕಾ..? ನೀವು ಮೊಡವೆಗಳಿಂದ ಬೇಸತ್ತಿದ್ದೀರಾ..? ಕಪ್ಪು ಕಲೆಗಳು, ಅಲರ್ಜಿಯಿಂದ ಕಂಗಾಲಾಗಿದ್ದೀರಾ? ಹಾಗಿದ್ದರೆ ಈ ರೆಸಪಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ.. ನೀವಂದುಕೊಂಡಂತೆ ಕಾಂತಿಯುತ ಸೌಂದರ್ಯ ನಿಮ್ಮದಾಗುತ್ತದೆ. ಈ ರೆಸಪಿ ಮಾಡಿಕೊಳ್ಳುವುದಕ್ಕೆ ಖರ್ಚು ಮಾಡುವ ಅಗತ್ಯವೇ ಇಲ್ಲ. ಮನೆಯಲ್ಲೇ ಇರುವ ಸಾಮಗ್ರಿಗಳನ್ನು ಬಳಸಿಕೊಂಡು, ಸುಂದರವಾದ ತ್ವಚೆ ಪಡೆಯಬಹುದು. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.
ಎರಡ್ಮೂರು ಚಮಚದಷ್ಟು ಹಾಲಿನ ಕೆನೆ ತೆಗೆದುಕೊಳ್ಳಿ. ಅದಕ್ಕೆ ಕಾಲು ಚಮಚದಷ್ಟು ಅರಿಶಿಣದ ಪುಡಿ, ಐದಾರು ಹನಿ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮುಖ, ಕುತ್ತಿಗೆ, ಕೈ-ಕಾಲುಗಳಿಗೆ ಹಚ್ಚಿಕೊಳ್ಳಿ. ಇದಕ್ಕೂ ಮೊದಲು ಮಿಶ್ರಣ ಹಚ್ಚಿಕೊಳ್ಳುವ ಭಾಗವನ್ನು ಶುದ್ಧ ನೀರಿನಲ್ಲಿ ತೊಳೆದುಕೊಂಡರೆ ಒಳ್ಳೆಯದು. ಏಕೆಂದರೆ, ರಾಸಾಯನಿಕಯುಕ್ತ ಕ್ರೀಮ್ ಹಚ್ಚಿಕೊಂಡೇ ಈ ಮಿಶ್ರಣ ಟ್ರೈ ಮಾಡಿದರೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ.
ಹಾಲಿನ ಕೆನೆ, ಅರಿಶಿಣದಪುಡಿ, ನಿಂಬೆರಸದ ಮಿಶ್ರಣವನ್ನು ಹಚ್ಚಿಕೊಂಡ ಬಳಿಕ, ಎರಡು ಅಥವಾ ಮೂರು ಗಂಟೆಗಳ ಕಾಲ ಹಾಗೆಯೇ ಒಣಗಲು ಬಿಡಿ. ಚೆನ್ನಾಗಿ ಒಣಗಿದ ಬಳಿಕ ಶುದ್ಧ ನೀರಿನಲ್ಲಿ ತೊಳೆದುಕೊಳ್ಳಿ. ಮೊದಲ ದಿನವೇ ನಿಮಗೆ ನಿರೀಕ್ಷಿತ ಫಲಿತಾಂಶ ಸಿಗುವುದು ನಿಶ್ಚಿತ. ಇದೇ ರೀತಿ ವಾರಕ್ಕೆ ಒಂದು ದಿನ ಅಥವಾ ಹದಿನೈದು ದಿನಗಳಿಗೊಮ್ಮೆ ಮಾಡಿದರೆ, ಕಾಂತಿಯುತ, ಮೊಡವೆ ರಹಿತ ತ್ವಚೆ ನಿಮ್ಮದಾಗುತ್ತದೆ. ಏಕೆಂದರೆ, ಹಾಲಿನ ಕೆನೆ ನಿಮ್ಮ ತ್ವಚೆಯನ್ನು ಮೃದುವಾಗಿಸಿದರೆ, ಅರಿಶಿಣ ತ್ವಚೆಯಲ್ಲಿನ ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಇನ್ನು, ನಿಂಬೆ ರಸ ಚರ್ಮದಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಪರಿಣಾಮ ಮೊಡವೆಗಳು, ಅಲರ್ಜಿ ಕಡಿಮೆಯಾಗಿ ಅತ್ಯುತ್ತಮ ತ್ವಚೆ ನಿಮ್ಮದಾಗುತ್ತದೆ.