ದೇಶ/ವಿದೇಶ

ಇರಾನ್ ಮೇಲೆ 2 ವಾರ ದಾಳಿ ನಡೆಸದಿರಲು ಅಮೆರಿಕ ಒಪ್ಪಿಗೆ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್ ಮೇಲೆ ವಿಧಿಸಿದ್ದ ಡೆಡ್‌ಲೈನ್ ಅಂತ್ಯಗೊಳ್ಳಲು ಕೇವಲ ಎರಡು ಗಂಟೆಗಳ ಕಾಲ ಬಾಕಿ ಇರುವಾಗ ನಾಟಕೀಯ ಬೆಳವಣಿಗೆ ನಡೆದಿದೆ. ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ತನ್ನ ನಿರ್ಧಾರದಿಂದ ಟ್ರಂಪ್ ಹಿಂದೆ ಸರಿದಿದ್ದು, ಮುಂದಿನ ಎರಡು ವಾರಗಳ ಕಾಲ ಯಾವುದೇ ದಾಳಿ ನಡೆಸದಿರಲು ತಾತ್ಕಾಲಿಕವಾಗಿ ಒಪ್ಪಿಗೆ ನೀಡಿದ್ದಾರೆ. ಈ ಮಹತ್ವದ ಬೆಳವಣಿಗೆಯನ್ನು ಸ್ವತಃ ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಕದನ ವಿರಾಮಕ್ಕೆ ಇರಾನ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಟ್ರಂಪ್ ಅವರ ಈ ನಡೆ ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿಯನ್ನು ಸದ್ಯಕ್ಕೆ ತಣಿಸಿದೆ.

ಈ ದ್ವಿಪಕ್ಷೀಯ ಕದನ ವಿರಾಮದ ಒಪ್ಪಂದದ ಭಾಗವಾಗಿ ಇರಾನ್ ಕೂಡ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹರ್ಮುಜ್ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ಸಂಚಾರಕ್ಕೆ ಮುಕ್ತಗೊಳಿಸಲು ಇರಾನ್ ಸಮ್ಮತಿಸಿದೆ. ಅಮೆರಿಕದ ಈ ಶಾಂತಿ ಪ್ರಕ್ರಿಯೆಗೆ ಇಸ್ರೇಲ್ ಕೂಡ ತನ್ನ ಬೆಂಬಲವನ್ನು ಘೋಷಿಸಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತುಸು ಹಗುರಾದಂತೆ ಕಂಡುಬರುತ್ತಿದೆ.

ಆದರೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇರಾನ್ ಉದ್ಧಟತನದ ಹೇಳಿಕೆಯನ್ನು ನೀಡಿದೆ. ಈ ಸಂಘರ್ಷದಲ್ಲಿ ಅಂತಿಮವಾಗಿ ತಾನೇ ಗೆದ್ದಿರುವುದಾಗಿ ಇರಾನ್ ಘೋಷಿಸಿಕೊಂಡಿದ್ದು, ಅಮೆರಿಕವು ಅವಮಾನಕರ ಸೋಲನ್ನು ಒಪ್ಪಿಕೊಂಡು ಕದನ ವಿರಾಮಕ್ಕೆ ಮುಂದಾಗಿದೆ ಎಂದು ಕಿಡಿಕಾರಿದೆ.

Comments (0)

Your email address will not be published. Required fields are marked *

Back to top button