Top Newsಆರೋಗ್ಯಉದ್ಯೋಗದೇಶ/ವಿದೇಶರಾಜಕೀಯವಾಣಿಜ್ಯಸುದ್ದಿಹಣಕಾಸು

ಬಜೆಟ್ 2026: ಬಟ್ಟೆ, ಮೊಬೈಲ್, ಔಷಧ ಅಗ್ಗ! ಯಾವುದರ ಬೆಲೆ ಏರಿಕೆ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಬಾರಿಯ ಬಜೆಟ್ ಸಾಮಾನ್ಯ ಜನರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮಟ್ಟದ ರಿಲೀಫ್ ನೀಡಿರುವ ಸರ್ಕಾರವು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 17 ಪ್ರಮುಖ ಔಷಧಗಳು ಮತ್ತು ಸಕ್ಕರೆ ಕಾಯಿಲೆಯ ಔಷಧಗಳ ಬೆಲೆಯನ್ನು ಇಳಿಕೆ ಮಾಡಿದೆ. ತಂತ್ರಜ್ಞಾನ ಪ್ರಿಯರಿಗೂ ಸಿಹಿಸುದ್ದಿ ಸಿಕ್ಕಿದ್ದು, ಸ್ಮಾರ್ಟ್‌ಫೋನ್‌ಗಳು, ಲಿಥಿಯಂ ಬ್ಯಾಟರಿಗಳು ಮತ್ತು ಮೈಕ್ರೋವೇವ್ ಓವನ್‌ಗಳ ಮೇಲಿನ ಸುಂಕ ಕಡಿತದಿಂದ ಇವುಗಳ ಬೆಲೆ ಅಗ್ಗವಾಗಲಿದೆ.

ಪರಿಸರ ಸ್ನೇಹಿ ಸಾರಿಗೆ ಮತ್ತು ಇಂಧನಕ್ಕೆ ಉತ್ತೇಜನ ನೀಡಲು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು, ಬಯೋಗ್ಯಾಸ್ ಮಿಶ್ರಿತ ಸಿಎನ್‌ಜಿ ಮತ್ತು ಸೋಲಾರ್ ಪ್ಯಾನಲ್‌ಗಳ ಬೆಲೆಯನ್ನು ತಗ್ಗಿಸಲಾಗಿದೆ. ಬಟ್ಟೆ ಬರೆ ಮತ್ತು ಚರ್ಮದ ಪಾದರಕ್ಷೆಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳ ಮೇಲಿನ ತೆರಿಗೆ ಇಳಿಕೆಯಾಗಿರುವುದರಿಂದ ಸಿದ್ಧ ಉಡುಪುಗಳು ಮತ್ತು ಶೂಗಳ ಬೆಲೆ ಇಳಿಕೆಯಾಗಲಿದೆ. ವಿದೇಶಿ ಪ್ರವಾಸದ ಪ್ಯಾಕೇಜ್‌ಗಳು ಮತ್ತು ವಿದೇಶಿ ಶಿಕ್ಷಣದ ವೆಚ್ಚಗಳು ಕೂಡ ಈ ಬಜೆಟ್ ನಂತರ ಜನಸಾಮಾನ್ಯರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ.

ಮತ್ತೊಂದೆಡೆ ಮದ್ಯ, ಸಿಗರೇಟ್ ಮತ್ತು ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಿಸಿರುವುದರಿಂದ ಇವುಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ. ಕೈಗಾರಿಕಾ ವಲಯದಲ್ಲಿ ಬಳಸುವ ವಿವಿಧ ಖನಿಜಗಳು ಮತ್ತು ಸ್ಕ್ರ್ಯಾಪ್‌ಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ. ಹೂಡಿಕೆದಾರರಿಗೆ ಸಂಬಂಧಿಸಿದಂತೆ ಷೇರು ಮಾರುಕಟ್ಟೆಯ ಫ್ಯೂಚರ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಮೇಲಿನ ನಿಯಮಗಳು ಕಠಿಣವಾಗಿದ್ದು, ಆದಾಯ ತೆರಿಗೆ ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡುವುದು ಇನ್ಮುಂದೆ ಭಾರಿ ದಂಡಕ್ಕೆ ಕಾರಣವಾಗಲಿದೆ. ಒಟ್ಟಾರೆಯಾಗಿ ಈ ಬಜೆಟ್ ಉತ್ಪಾದನಾ ವಲಯವನ್ನು ಬಲಪಡಿಸುವ ಮೂಲಕ ಸಾಮಾನ್ಯ ಜನರ ಜೀವನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

Comments (0)

Your email address will not be published. Required fields are marked *

Back to top button