ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟದವರೆಗೆ ಸದ್ದು ಮಾಡ್ತಿರೋ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಮಾರ್ಚ್ 19ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದ್ದು, ಇದಕ್ಕೂ ಒಂದು ವಾರ ಮುನ್ನ ಅಂದ್ರೆ ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಪವರ್‌ಫುಲ್ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಈಗಾಗಲೇ ರಿಲೀಸ್ ಆಗಿರೋ ಟೀಸರ್‌ಗಿಂತಲೂ ಹತ್ತು ಪಟ್ಟು ಹೆಚ್ಚು ಮಾಸ್ ಆಗಿರಲಿದೆಯಂತೆ ಈ ಟ್ರೈಲರ್!ಈ ಚಿತ್ರದ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ ದಿಲ್ ರಾಜು ಅವರು ದಾಖಲೆ ಬೆಲೆಗೆ ಹಕ್ಕುಗಳನ್ನು ಖರೀದಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಯಶ್ ಅವರೂ ಕಥೆ ಬರೆದಿದ್ದು, ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಯಶ್ ಅವರನ್ನು ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಪ್ರಚಾರಕ್ಕಾಗಿ ಯಶ್ ಈ ಬಾರಿ ಹೊಸ ಮಾದರಿಯನ್ನು ಅನುಸರಿಸಲಿದ್ದು, ಪ್ರಮುಖ ನಗರಗಳಲ್ಲಿ ಬೃಹತ್ ಪ್ರೀ-ರಿಲೀಸ್ ಇವೆಂಟ್‌ಗಳು ನಡೆಯಲಿವೆ.


