ಹುಬ್ಬಳ್ಳಿ: ಗ್ರಾಮಸ್ಥರಿಗೆ ಗ್ರಾಮಲೆಕ್ಕಾಧಿಕಾರಿ ತುಂಬಾನೇ ಮುಖ್ಯ..ಆದ್ರೆ ಇಲ್ಲೊಂದು ಊರಲ್ಲಿ ಆತನನ್ನ ಹುಡುಕೋದೇ ದೊಡ್ಡ ಪ್ರಯಾಸದ ಕೆಲಸವಾಗಿದೆ. ಇನ್ನು ಆ ಗ್ರಾಮಲೆಕ್ಕಾಧಿಕಾರಿಗೆ ಗ್ರಾಮದಲ್ಲಿದ್ದು ಕೆಲಸ ಮಾಡೋ ಇಚ್ಚೇ ಇದ್ರು ಆತನಿಗೊಂದು ನೆಲೆ ಇಲ್ಲ.. ಹೌದು ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಮತ್ತು ಲೆಕ್ಕಾಧಿಕಾರಿ ಹೈರಾಣಾಗಿ ಹೋಗಿದ್ದಾರೆ.
ಹೌದು ಗ್ರಾಮದ ರೈತರಿಗೆ, ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ ಪ್ರತಿಯೊಬ್ಬರಿಗೂ ಲೆಕ್ಕಾಧಿಕಾರಿಗೆ ಬೇಕೆ ಬೇಕು…ಆತನಿಲ್ಲದೇ ಯಾವ ಸರ್ಕಾರಿ ಕೆಲಸವೂ ಆಗೋದಿಲ್ಲ.. ಆದ್ರೆ ಈ ಗ್ರಾಮದ ಲೆಕ್ಕಾಧಿಕಾರಿ ಕೆಲಸ ನಿರ್ವಹಿಸಬೇಕಿದ್ದ ಕಟ್ಟಡ ಪಾಳುಬಿದ್ದು ವರ್ಷಗಳೇ ಕಳೆದು ಹೋಗಿದೆ. ಅಂದಾಗೆ ಇಂತಹದ್ದೊಂದು ಸ್ಥಿತಿ ಎದುರಾಗಿರೋದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ. ಇದೀಗ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಅಂದಾಗೆ ಚಾಕಲಬ್ಬಿ ಗ್ರಾಮದಲ್ಲಿ ಲೆಕ್ಕಾಧಿಕಾರಿಯ ಚಾವಡಿ ದುರಸ್ತಿಗಾಗಿ ಕಾದು ಕುಳಿತಿದೆ. ಸುಮಾರು ಎಂಟು ವರ್ಷಗಳಿಂದಲೂ ದುರಸ್ತಿ ಕಾಣದೆ ನೆನೆಗುದಿಗೆ ಬಿದ್ದಿದೆ. ಇದೀಗ ಗ್ರಾಮದ ಲೆಕ್ಕಾಧಿರಿ ಕೂರೋಕೆ ಸ್ಥಳವಿಲ್ಲದೆ ಪರದಾಡುತ್ತಿದ್ದಾರೆ. ಅತ್ತ ಅಧಿಕಾರಿ ಪರದಾಡುತ್ತಿದ್ದರೆ ಇತ್ತ ಗ್ರಾಮಸ್ಥರು ಅಧಿಕಾರಿಯನ್ನ ಹುಡುಕೋಕೆ ಪರದಾಡುತ್ತಿದ್ದಾರೆ. ಆತನನ್ನ ಹುಡುಕೋದೆ ಪ್ರಯಾಸವಾಗಿ ಹೋಗಿದೆ. ಎಲ್ಲಿ ಕೂತು ಕೆಲಸ ಮಾಡ್ಬೇಕು ಅನ್ನೋ ಪ್ರಶ್ನೆ ಗ್ರಾಮಲೆಕ್ಕಾಧಿಕಾರಿಯದ್ದಾದರೆ, ಆತನನ್ನ ಹುಡುಕಿಕೊಂಡು ಓಡಾಡೋದು ಹೇಗೆ ಅನ್ನೋ ಪ್ರಶ್ನೆ ಗ್ರಾಮಸ್ಥರದ್ದು.. ಇನ್ನು ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡರು ಒಮ್ಮೆ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವತೆ ತಿಳಿದು ಅನುಕೂಲ ಮಾಡಿಕೊಡಬೇಕು ಅನ್ನೋದು ಗ್ರಾಮಸ್ಥರ ಒತ್ತಾಯ.
ಇನ್ನೂ ಚಾಕಲಬ್ಬಿ ಗ್ರಾಮವು ಕುಂದಗೋಳ ತಾಲ್ಲೂಕು ಕೇಂದ್ರದಿಂದ 20 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ 350ಕ್ಕೂ ಅಧಿಕ ಕುಟುಂಬಗಳಿದ್ದು, ಸುಮಾರು 3 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿದೆ. ಈಗ ಈ ಎಲ್ಲ ಜನರು ಸರ್ಕಾರಿಯ ಯೋಜನೆಯ ವಿಧವಾ ವೇತನ, ಸಂಧ್ಯಾ ಸುರಕ್ಷಾ, ವೃದ್ಧರ ಪಿಂಚಣಿ, ರೈತರ ಪಹಣಿ ನಕಲು ಸೇರಿದಂತೆ ಗ್ರಾಮ ಅಢಳಿತಾಧಿಕಾರಿ ವ್ಯಾಪ್ತಿಯ ಕೆಲಸ ಕಾರ್ಯಗಳಿಗೆ ಅಲೆದಾಟವೇ ಶಾಪವಾಗಿದೆ. ಅಧಿಕಾರಿಗಳು, ಶಾಸಕರು ಚಾಕಲಬ್ಬಿ ಗ್ರಾಮದ ಜನರಿಗೊಂದು ಪರ್ಯಾಯ ಕಲ್ಪಿಸ್ತಾರಾ ಕಾದು ನೋಡಬೇಕು.