
ರಾಮನಗರ: ಹೆಣ್ಣು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಬೆದರಿಸಿ ಅವರಿಂದ ನೀವು ಸದಾಶಿವನಗರದ ನಿವೇಶನ ಬರೆಸಿಕೊಂಡಿದ್ದೀರಿ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಆರೋಪ. ಅವರು ಮೈಸೂರು ಚಲೋ ಪಾದಯಾತ್ರೆ ಕಾರ್ಯಕ್ರಮಕ್ಕೆ ಬಿಡದಿಯಲ್ಲಿ ಚಾಲನೆ ನೀಡಿ ಮಾತನಾಡಿದರು.
ನಿಮ್ಮದೆಲ್ಲ ಬಿಚ್ಚಿಡುತ್ತೀನಿ ಎಂಬ ಡಿಕೆಶಿ ಆರೋಪಕ್ಕೆ ನೀವಿರೋದು ಗಾಜಿನ ಮನೆಯಲ್ಲಿ, ಏನೋ ಬಿಚ್ಚಿಡುತ್ತೀನಿ ಎಂದೆಯಲ್ಲಪ್ಪ, ಬಿಚ್ಚಿಡು, ನಾನು ಬಿಚ್ಚಿಡುವುದಕ್ಕೆ ಹೋದರೆ ಪುಟಗಟ್ಟಲೆ ಇದೆ. ನಿನಗೆ ಅಜ್ಜಯ್ಯನ ಮೇಲೆ ಭಕ್ತಿ-ಗೌರವ ಇದ್ದರೆ ಪ್ರಮಾಣ ಮಾಡು, ನಾನೂ ಪ್ರಮಾಣ ಮಾಡುತ್ತೇನೆಂದು ಡಿಕೆಶಿಗೆ ಸವಾಲ್ ಹಾಕಿದ್ದರು. ನಾನು ಯಾವುದೇ ಕಾರಣಕ್ಕೂ ಯಡಿಯೂರಪ್ಪನವರಿಗೆ ದ್ರೋಹ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ನಾನು ಯಾವುದೇ ಕಾರಣಕ್ಕೂ ಅಧಿಕಾರ ಕೊಡಿ ಎಂದು ಬಂದಿರಲಿಲ್ಲ. ನೀವೇ ಸಿಎಂ ಮಾಡಿದ್ರಿ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು. ದಕ್ಷ ಪೊಲೀಸ್ ಅಧಿಕಾರಿ 20 ಲಕ್ಷ ಕೊಟ್ಟು ಕೆಲಸಕ್ಕೆ ಬಂದಿದ್ದಾರೆ. ಇನ್ನೂ 30 ಲಕ್ಷ ಕೊಡಬೇಕಂತೆ. ಪೊಲೀಸ್ ಅಧಿಕಾರಿಯನ್ನೇ ರಕ್ಷಣೆ ಮಾಡದವರು ಜನರನ್ನು ಹೇಗೆ ರಕ್ಷಣೆ ಮಾಡುತ್ತೀರೆಂದು ಅವರು ಹೇಳಿದರು. ದಲಿತರಿಗೆ ಸೇರಿದ ಸೊಸೈಟಿಯನ್ನು ನಕಲು ಮಾಡಿ 68 ಎಕರೆ ಜಮೀನು ಕಬಳಿಸಿದ್ದಾರೆಂದು ಆರೋಪ ಮಾಡಿದವರು ನಾನು ಸಿನಿಮಾ ವಿತರಕನಾಗಿದ್ದಾಗ 15 ವರ್ಷದಿಂದೆ ನಾನು 45 ಎಕರೆ ಜಮೀನು ಖರೀದಿಸಿದ್ದೇನೆ.
ಇದು ವಂಚನೆಯೆಂದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ಹೇಳಿದರು. ಮಂತ್ರಿಗಳಲ್ಲಿ ಭ್ರಷ್ಠಾಚಾರ ನಡೆಸಲು ಪೈಪೋಟಿ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಕ್ರಮದ ಬಗ್ಗೆ ಒಂದೂ ದಾಖಲೆಯನ್ನು ಬಿಡುಗಡೆ ಮಾಡಿಲ್ಲವೆಂದರು. ಮುಖ್ಯಮಂತ್ರಿಗಳು ಪತ್ನಿಯ ಹೆಸರಿನಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು 15 ಸೈಟುಗಳನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ, ಮಾಜಿ ಸಚಿವರುಗಳಾದ ಶ್ರೀರಾಮುಲು ಸಿಸಿ ಪಾಟೀಲ್, ಸಂಸದ ಡಾ. ಮಂಜುನಾಥ್, ಯುವಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಧಾನ ಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅನೇಕರು ಹಾಜರಿದ್ದರು.




