ಟೀಂ ಇಂಡಿಯಾ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ. ಫೈನಲ್ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ. ಈ ಚಾಂಪಿಯನ್ ಪಟ್ಟದ ಹೊರತಾಗಿಯೂ ಭಾರತ ತಂಡ ಏಷ್ಯಾಕಪ್ ಟ್ರೋಫಿ ಸ್ವೀಕರಿಸಿಲ್ಲ. ಏಷ್ಯಾಕಪ್ ಟ್ರೋಫಿ ಇಲ್ಲದೆ ಟೀಮ್ ಇಂಡಿಯಾ ಸಂಭ್ರಮಿಸಿದೆ. ಇದಕ್ಕೆ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಪಾಕಿಸ್ತಾನದವರಾಗಿರುವುದು.
ಪಾಕಿಸ್ತಾನ ಮೂಲದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ‘ಏಷ್ಯಾ ಕಪ್ ಟ್ರೋಫಿ’ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಅದರಂತೆ ಟ್ರೋಫಿ ಗೆದ್ದರೂ ಟೀಂ ಇಂಡಿಯಾ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಪರಿಣಾಮ ಪ್ರಶಸ್ತಿ ಪ್ರದಾನ ಸಮಾರಂಭವು ಸುಮಾರು ಒಂದು ಗಂಟೆ ತಡವಾಗಿ ಪ್ರಾರಂಭವಾಯಿತು.
ಇನ್ನು ಈ ನಿರಾಕರಣೆಯ ಹೊರತಾಗಿಯೂ ಭಾರತ ತಂಡ ಟ್ರೋಫಿ ಇಲ್ಲದೆ ಸಂಭ್ರಮಿಸಿರುವುದು ವಿಶೇಷ. ಇದೀಗ ಟ್ರೋಫಿ ಇಲ್ಲದೇ ಟೀಮ್ ಇಂಡಿಯಾ ಸೆಲೆಬ್ರೇಷನ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತ ಭಾರತ ತಂಡದ ಈ ನಡೆಗೆ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.


