ರಾಜಕೀಯ
ಯತ್ನಾಳ್ ಉಚ್ಚಾಟನೆ; ರೆಬಲ್ಸ್ ಗುಪ್ತ್ ಮೀಟಿಂಗ್

ಬೆಂಗಳೂರು: ಬಿಜೆಪಿಯ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಭಿನ್ನಮತೀಯರ ಜೊತೆ ಸಭೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಯತ್ನಾಳ್ ಜೊತೆಗೆ ಸಭೆ ನಡೆಸುವವರ ಮೇಲೆ ಶಿಸ್ತು ಕ್ರಮ ಜರುಗಿಸುವುದು ಖಚಿತ ಎಂದು ವರಿಷ್ಟರು ಸ್ಪಷ್ಟ ಸೂಚನೆ ಕೊಟ್ಟಿದ್ದರು. ಇದನ್ನು ಲೆಕ್ಕಿಸದೆ, ಭಿನ್ನಮತೀಯರು ಸಭೆ ನಡೆಸುವ ಮೂಲಕ ವರಿಷ್ಟರಿಗೆ ನೇರಾ ನೇರ ಸಡ್ಡು ಹೊಡೆದಿದ್ದಾರೆ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ನಿವಾಸದಲ್ಲಿ ಉಚ್ಛಾಟಿತ ಶಾಸಕ ಯತ್ನಾಳ್, ರಮೇಶ್ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಕುಮಾರ್ ಬಂಗಾರಪ್ಪ, ಪ್ರತಾಪ್‌ಸಿಂಹ, ಎನ್.ಆರ್.ಸಂತೋಷ್, ಶೋಕಾಸ್ ನೊಟೀಸ್ ಪಡೆದಿರುವ ಶಾಸಕ ಬಿ.ಪಿ.ಹರೀಶ್ ಸಹ ಸಭೆಯಲ್ಲಿ ಭಾಗಿಯಾಗಿದ್ದರು.




