Wednesday, April 30, 2025
24.6 C
Bengaluru
LIVE
ಮನೆಜಿಲ್ಲೆಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ

ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ

ಚಿಕ್ಕೋಡಿ :  ಚಿಕ್ಕೋಡಿ ಪಟ್ಟಣದ ಆರ್‌ಡಿ ಕಾಲೇಜು ಕ್ಯಾಂಪಸ್ ನಲ್ಲಿ ಸುಮಾರು 2,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಇದರಲ್ಲಿ ಸುಮಾರು 1000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಸಂಜೆ ತರಗತಿಗಳು ಮುಗಿದ ನಂತರ ಆರ್‌ಡಿ ಕಾಲೇಜು ಮುಂಭಾಗದಲ್ಲಿ ಅತೀ ಹೆಚ್ಚಾಗಿ ವಾಹನಗಳು ಓಡಾಡುವುದರಿಂದ ವಿದ್ಯಾರ್ಥಿಗಳಿಗೆ ಅಪಘಾತವಾಗುವ ಸಂಭವವಿರುತ್ತದೆ. ಈಗಾಗಲೇ ಚಿಕ್ಕೋಡಿ ಪಟ್ಟಣದಲ್ಲಿ ರೋಡ್ ಹಂಪ್ಸ್ ಇಲ್ಲದೆ ಇರುವುದರಿಂದ ಅಪಘಾತಗಳಾಗಿರುವ ಉದಾಹರಣೆಗಳಿವೆ. ಆದಕಾರಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆರ್‌ಡಿ ಕಾಲೇಜು ಮುಂಭಾಗದಲ್ಲಿ ವೇಗ ನಿಯಂತ್ರಣಕ್ಕಾಗಿ ಅಡ್ಡವಾಗಿ ರೋಡ್ ಹಂಪ್ಸ್ ಅಳವಡಿಸಬೇಕೆಂದು ಅನೇಕ ಬಾರಿ ಮನವಿ ಮಾಡಿಕೊಂಡರು ಸಮಸ್ಯೆ ಬಗೆಹರಿಯದ ಕಾರಣ ಪ್ರತಿಭಟನೆ ನಡೆಸಿದೆ.

ಎಬಿಪಿಪಿ ಮುಖಂಡರು ಮಾತನಾಡಿ, ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಭೇಟಿಯಾದಾಗಲೂ ಸಮಸ್ಯೆ ಬಗೆಹರಿದಿಲ್ಲ, ಅಧಿಕಾರಿಗಳು ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಚಿಕ್ಕೋಡಿ ನಗರದ ಅನೇಕ ಕಡೆ ಅವೈಜ್ಞಾನಿಕ ರೋಡ್ ಹಂಪ್ಸ್ ಗಳಿವೆ , ಆದರೆ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಸಂಜೆ ಶಾಲೆಗೆ & ಕಾಲೇಜು ಮುಗಿದ ನಂತರ ಅನೇಕ ವಾಹನಗಳು ಓಡಾಡುತ್ತಿರುತ್ತವೆ. ವೇಗ ನಿಯಂತ್ರಣಕ್ಕೆ ರೋಡ್ ಹಂಪ್ಸ್ ಇಲ್ಲದೆ ಇರುವುದರಿದ ಅಪಘಾತವಾಗುವ ಸಂಭವವಿರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಹೆದ್ದಾರಿ ಪ್ರಾಧಿಕಾರ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಆಗ್ರಹಿಸುತ್ತೇನೆ.

ಈ ಸಂಧರ್ಭದಲ್ಲಿ ನಗರ ಕಾರ್ಯದರ್ಶಿ ಸೂರಜ್ ಕಿಳ್ಳಿಕೇತ್ರ, SEC ಸದಸ್ಯ ಚಂದ್ರಶೇಖರ ಗುಡಸಿ, SEC ಸದಸ್ಯ ಅನೂಪ ಪಾಟೀಲ,ಪ್ರವೀಣ ಬಾಬಣ್ಣವರ, SEC ಸದಸ್ಯ ಬಿಂದಿಯ ಪಾಟೀಲ,ಸಂತೋಷ ಬಾಳಪ್ಪಗೊಳ
ಹಾಗೂ ಸುಮಾರು 1500 ವಿದ್ಯಾರ್ಥಿಗಳು ಭಾಗಿ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments