ಲೈಫ್ ಸ್ಟೈಲ್ಸಿನಿಮಾ

ಸೌಂದರ್ಯಕ್ಕಾಗಿ ಸರ್ಜರಿ ಮೊರೆ ಹೋದ ಶ್ರೀದೇವಿ ಪುತ್ರಿ!

ಬಾಲಿವುಡ್‌ನ ಗ್ಲಾಮರಸ್ ನಟಿ ಜಾನ್ಹವಿ ಕಪೂರ್ ತಮ್ಮ ಸೌಂದರ್ಯದ ರಹಸ್ಯದ ಬಗ್ಗೆ ನೀಡಿದ ಶಾಕಿಂಗ್ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿಯಾಗಿರುವ ಜಾನ್ಹವಿ, ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ತಮ್ಮ ಅಂದವನ್ನು ಕೃತಕವಾಗಿ ಹೆಚ್ಚಿಸಿಕೊಂಡಿದ್ದಾರೆ ಎಂಬ ಟೀಕೆಗಳು ಹಿಂದಿನಿಂದಲೂ ಕೇಳಿಬರುತ್ತಿದ್ದವು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮೌನ ಮುರಿದಿರುವ ಜಾನ್ಹವಿ, ತಾವು ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿರುವುದನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಐವಿ ಡ್ರಿಪ್ ಹಾಕಿಸಿಕೊಂಡು ಮೇಕಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಅವರು ತಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ಗ್ಲೋವಿಂಗ್ ಐವಿ ಡ್ರಿಪ್ ಮೊರೆ ಹೋಗಿರುವುದು ಖಚಿತಪಟ್ಟಿದೆ. ಅಂಗಾಂಗಗಳನ್ನು ಉಬ್ಬಿಸಲು ಮತ್ತು ತಗ್ಗಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನಲಾಗುವ ಫೋಟೋಗಳು ವೈರಲ್ ಆಗಿದ್ದರೂ, ಜಾನ್ಹವಿ ಮಾತ್ರ ತಾವು ‘ಬುದ್ಧಿವಂತ ಹಾಗೂ ಸರಿಯಾದ’ ನಿರ್ಧಾರಗಳನ್ನೇ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ ವಿಷಯದಲ್ಲಿ ಪಾರದರ್ಶಕತೆ ಇರಬೇಕು ಎಂದು ಹೇಳಿರುವ ಅವರು, ಈ ವಿಚಾರದಲ್ಲಿ ತಮಗೆ ತಾಯಿ ಶ್ರೀದೇವಿಯವರ ಮಾರ್ಗದರ್ಶನವೂ ಇತ್ತು ಎಂದು ತಿಳಿಸಿದ್ದಾರೆ. ಸದ್ಯ ತೆಲುಗಿನ ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಜೊತೆ ನಟಿಸುತ್ತಿರುವ ಜಾನ್ಹವಿ, ತಮ್ಮ ನ್ಯಾಚುರಲ್ ಲುಕ್ ಬದಲಾಗಿ ಕೃತಕ ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವುದು ಈಗ ಚರ್ಚೆಯ ವಿಷಯವಾಗಿದೆ.

Comments (0)

Your email address will not be published. Required fields are marked *

Back to top button