ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ, ನೂತನವಾಗಿ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕಚೇರಿಯನ್ನು ಪೊಲೀಸ್ ಎಸ್ಪಿ ಕುಶಾಲ್ ಚೌಕ್ಸೆ ಉದ್ಘಾಟಿಸಿದ್ದಾರೆ.
ಹಳೇ ತಾಲೂಕು ಕಚೇರಿ ಬಳಿ ಇದ್ದ ಡಿವೈಎಸ್ಪಿ ಕಚೇರಿ ಜಾಗವನ್ನು, ಸರ್ಕಾರಿ ಅಸ್ಪತ್ರೆ ನಿರ್ಮಾಣ ಕಾಮಗಾರಿಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ನಗರ ಪೋಲೀಸ್ ಠಾಣೆ ಹಿಂಭಾಗದಲ್ಲಿದ್ದ, ಪೋಲಿಸ್ ವಸತಿ ಗೃಹಗಳ ಬಳಿ ನೂತನವಾಗಿ ಡಿವೈಎಸ್ಪಿ ಕಚೇರಿಯನ್ನು ತಾತ್ಕಾಲಿಕವಾಗಿ ಆರಂಭ ಮಾಡಲಾಡಗಿದೆ. ಡಿವೈಎಸ್ಪಿ ಮುರಳಿಧರ್ ಮತ್ತು ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿ ಕಚೇರಿಯೊಳಗೆ ಪ್ರವೇಶ ಮಾಡಿದರು. ಈ ಸಂದರ್ಭದಲ್ಲಿ ನಗರಠಾಣೆಯ ಸಿಐ ವಿಜಿಕುಮಾರ್, ಗ್ರಾಮಾಂತರ ಠಾಣೆಯ ಸಿಐ ಶಿವರಾಜ್, ಶಿಡ್ಲಘಟ್ಟ ವೃತ್ತದ ಸಿಐ ಶ್ರೀನಿವಾಸ್ ಸೇರಿದಂತೆ, ಇತರೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.


