ಸಿನಿಮಾ

ಶಿವಕಾರ್ತಿಕೇಯನ್-ಕಮಲ್ ಹಾಸನ್ ಮತ್ತೆ ಒಂದಾದ್ರು! ‘ಸಿಯೋನ್’ ಮೋಷನ್ ಪೋಸ್ಟರ್ ವೈರಲ್

ಕಾಲಿವುಡ್‌ನ ‘ಪ್ರಿನ್ಸ್’ ಶಿವಕಾರ್ತಿಕೇಯನ್ ಮತ್ತು ‘ಉಳಗನಾಯಗನ್’ ಕಮಲ್ ಹಾಸನ್ ಅವರ ಯಶಸ್ವಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರಕ್ಕೆ ‘ಸಿಯೋನ್’ ಎಂದು ಟೈಟಲ್ ಇಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಈ ಹಿಂದೆ ಇದೇ ಜೋಡಿಯ ‘ಅಮರನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈಗ ಅದೇ ಭರವಸೆಯೊಂದಿಗೆ ‘ರಾಜ್ ಕಮಲ್ ಇಂಟರ್ನ್ಯಾಷನಲ್’ ಸಂಸ್ಥೆಯಡಿ ಕಮಲ್ ಹಾಸನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶಿವಕಾರ್ತಿಕೇಯನ್ ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾದ ಗ್ಲಿಂಪ್ಸ್‌ನಲ್ಲಿ ಅವರ ಲುಕ್ ಸಂಪೂರ್ಣ ಭಿನ್ನವಾಗಿದೆ.

ಹಣೆಯಲ್ಲಿ ವಿಭೂತಿ, ಕೈಯಲ್ಲಿ ಕತ್ತಿ ಹಿಡಿದು ರಗಡ್ ಮತ್ತು ಮಾಸ್ ಅವತಾರದಲ್ಲಿ ಶಿವಕಾರ್ತಿಕೇಯನ್ ಕಾಣಿಸಿಕೊಂಡಿದ್ದು, ಇದೊಂದು ಪಿರಿಯಾಡಿಕಲ್ ಅಥವಾ ಹಳ್ಳಿಯ ಹಿನ್ನೆಲೆಯ ಸಾಹಸ ಪ್ರಧಾನ ಕಥೆ ಇರಬಹುದು ಎಂಬ ಸುಳಿವು ನೀಡಿದೆ. ಶಿವಕುಮಾರ್ ಮುರುಗೇಶನ್ ನಿರ್ದೇಶನದ ಈ ಚಿತ್ರಕ್ಕೆ ಸಂತೋಷ್ ನಾರಾಯಣ್ ಅವರ ಖದರ್ ಫುಲ್ ಸಂಗೀತವಿದ್ದು, 2026ರ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಕಾಣುವ ಗುರಿ ಇಟ್ಟುಕೊಳ್ಳಲಾಗಿದೆ.

Comments (0)

Your email address will not be published. Required fields are marked *

Back to top button