ಬೆಳಗಾವಿ : ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ರಸ್ತೆಯ ಶಾಂತಿನಗರದ ಬಳಿಯ ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನಾಭರಣ ದೋಚುತ್ತಿದ್ದ ಡಕಾಯಿತಿ ಗ್ಯಾಂಗ್ ಹೆಡೆಮುರಿಕಟ್ಟುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಸವದತ್ತಿ ತಾಲೂಕಿನ ಮಹಮ್ಮದ್ ಇಮಾಮ್ ಸಾಬ್ ಕಲ್ಲೇದ್, ಮುತ್ತಣ್ಣ ಗುತ್ತೆದಾರ, ಲಾಲಸಾಬ್ ರಾಂಪೂರ, ಇಬ್ರಾಹಿಮ್ ಕುಡಚಿ ಬಂಧಿತ ಆರೋಪಿಗಳಾಗಿದ್ದಾರೆ.ಪ್ರಕರಣದ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಳೆದ ಆಗಷ್ಟ್ 24ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ರಸ್ತೆಯ ಶಾಂತಿನಗರದ ಬಳಿ ದರೋಡೆ ಆಗಿತ್ತು.ನಿರ್ಜನ ಗುಡ್ಡಗಾಡು ಪ್ರದೇಶ ಹಿನ್ನೆಲೆ ನಾಲ್ಕೈದು ಜನರ ಗ್ಯಾಂಗ್ ನಿಂದ ಕೃತ್ಯ ಎಸಗಿ ಪರಾರಿ ಆಗಿದ್ದರು.
ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಗೆ ಅಡ್ಡಹಾಕಿ ಚಿನ್ನಾಭರಣ ದೋಚಿದ್ದರು. ಈ ಕುರಿತು ಅಶೋಕ ಬಾಗೇವಾಡಿ ಎಂಬುವವರಿಂದ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಸವದತ್ತಿ ಪೊಲೀಸರಿಂದ ತನಿಖೆ ಕೈಗೊಂಡ ಹಿಂದಿನ ಸಿಪಿಐ ಕರುಣೇಶಗೌಡ,ಈಗಿನ ಸಿಪಿಐ ಧರ್ಮಾಕರ್ ದರ್ಮಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಇದು ದರೋಡೆ ಪ್ರಕರಣವಲ್ಲ ಡಕಾಯಿತಿ ಪ್ರಕರಣ ಅಂತಾ ಪೊಲೀಸರು ನಿರೂಪಿಸಿದ್ದಾರೆ.ದೂರು ನೀಡಿದಾಗ ಮೂವರು ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಡಕಾಯಿತಿ ಪ್ರಕರಣದಲ್ಲಿ ಓರ್ವ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ನಾಲ್ಕು ಜನ ಆರೋಪಿಗಳ ಭಾಗಿಯಾಗಿದ್ದರು. ಈಗಾಗಲೇ ನಾಲ್ಕು ಆರೋಪಿಗಳನ್ನ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.ಕಾನೂನಿನ ಸಂಘರ್ಷ ಒಳಗಾಗಿದ್ದ ಬಾಲಕನ್ನ ಬಾಲ ನ್ಯಾಯಮಂಡಳಿಗೆ ಒಪ್ಪಿಸಿದ್ದೇವೆ.ಬಂಧಿತರಿಂದ ಬಂಗಾರ ಚಿನ್ನದ ಕೈಗಡಗ,ಚೈನು, ಪೋನ್, ಬೈಕ್ ಜಪ್ತಿ ಮಾಡಲಾಗಿದೆ.8ಲಕ್ಷ 68ಸಾವಿರ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ್ ಮಾಹಿತಿ ನೀಡಿದರು.