ಸಿನಿಮಾ

ವೈಭವ್ ಕ್ರಿಯೇಟಿವಿಟಿಗೆ ಸ್ಯಾಂಡಲ್‌ವುಡ್ ಡಾಲಿ ಧನಂಜಯ ಫಿದಾ!

ನಟ ಡಾಲಿ ಧನಂಜಯ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರತಿಭೆಗಳಿಗೆ ಸಖತ್ ಸಪೋರ್ಟ್ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಸಿಂಗರ್ ವೈಭವ್ ಮಾಡಿರುವ ಹೊಸ ವಿಡಿಯೋ ನೋಡಿ ಫುಲ್ ಫಿದಾ ಆಗಿರುವ ಡಾಲಿ, “ಸೂಪರ್ ಇದೆ ವೈಭವ, ಲವ್ಡ್ ಇಟ್” ಎಂದು ಬರೆದುಕೊಂಡು ಆ ವಿಡಿಯೋ ಲಿಂಕ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ ಅವರ ಈ ಒಂದು ಪೋಸ್ಟ್‌ನಿಂದಾಗಿ ವೈಭವ್ ಅವರ ಕ್ರಿಯೇಟಿವಿಟಿ ಈಗ ಎಲ್ಲೆಡೆ ಸೌಂಡ್ ಮಾಡುತ್ತಿದ್ದು, ನೆಟ್ಟಿಗರು ಕೂಡ ಈ ಅಲ್ಟಿಮೇಟ್ ಕೆಲಸಕ್ಕೆ ಫುಲ್ ಮಾರ್ಕ್ಸ್ ಕೊಡುತ್ತಿದ್ದಾರೆ. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಡಾಲಿ ಅವರ ಈ ಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ವೈಭವ್ ಅವರ ಈ ವಿಡಿಯೋ ಸದ್ಯ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಸಖತ್ ವೈರಲ್ ಆಗುತ್ತಿದೆ.

Comments (0)

Your email address will not be published. Required fields are marked *

Back to top button