Top Newsಕ್ರೈಂ ಸ್ಟೋರಿದೇಶ/ವಿದೇಶಸುದ್ದಿ

99ರ ವೃದ್ಧೆಯನ್ನು ಕೊಂದ ದರೋಡೆಕೋರ..!

ಪಂಜಾಬ್‌: ಶತಾಯುಷಿ ಸಂಭ್ರಮಕ್ಕೆ ಕೆಲವೇ ತಿಂಗಳು ಬಾಕಿ ಇರುವಾಗಲೇ 99 ವರ್ಷದ ವೃದ್ಧೆ ಜೋಗಿಂದರ್ ಕೌರ್ ಎಂಬುವವರು ದರೋಡೆಕೋರನ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.

ಪಂಜಾಬ್‌ನ ಚಬ್ಬೇವಾಲ್ ಪ್ರದೇಶದ ಭಾಮ್ ಹಳ್ಳಿಯಲ್ಲಿ ಈ ಘೋರ ಕೃತ್ಯ ನಡೆದಿದ್ದು, ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯನ್ನು ಕೊಲೆ ಮಾಡಿ ಅವರ ಶವವನ್ನು ಕಬ್ಬಿಣದ ಪೆಟ್ಟಿಗೆಯೊಳಗೆ ತುಂಬಿ ಹಂತಕ ಪರಾರಿಯಾಗಿದ್ದಾನೆ. ಸತತ ಎರಡು ದಿನ ಮನೆಯ ಬಾಗಿಲಲ್ಲೇ ಹಾಲಿನ ಬಾಟಲಿಗಳು ಬಿದ್ದಿರುವುದನ್ನು ಗಮನಿಸಿದ ಹಾಲು ಮಾರಾಟಗಾರ ನೆರೆಹೊರೆಯವರಿಗೆ ತಿಳಿಸಿದಾಗ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕಳ್ಳತನದ ಉದ್ದೇಶದಿಂದ ಮನೆಗೆ ನುಗ್ಗಿದ ಅದೇ ಗ್ರಾಮದ ಡೇನಿಯಲ್ ಎಂಬಾತ ದರೋಡೆಗೆ ಅಡ್ಡಿಯಾದ ವೃದ್ಧೆಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಹಂತಕನಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

Comments (0)

Your email address will not be published. Required fields are marked *

Back to top button