‘ಪಡೆಯಪ್ಪ’ ಸಿನಿಮಾನಲ್ಲಿ ಸೌಂದರ್ಯ ಕಂಡರೆ ರಜನೀಕಾಂತ್‌ಗೆ ಪ್ರೀತಿ, ಆದರೆ ರಮ್ಯಾಕೃಷ್ಣಳಿಗೆ ರಜನೀಕಾಂತ್ ಕಂಡರೆ ಮೋಹ. ಇದೇ ಕಾರಣಕ್ಕೆ ರಮ್ಯಾಕೃಷ್ಣಳಿಗೆ ಸೌಂದರ್ಯಳನ್ನು ತುಚ್ಚಳಾಗಿ ಕಾಣುತ್ತಿರುತ್ತಾಳೆ. ಒಂದು ದೃಶ್ಯದಲ್ಲಂತೂ ತನ್ನ ಕಾಲಿನಿಂದ ಸೌಂದರ್ಯಳ ಕೆನ್ನೆಯನ್ನು ಸವರುತ್ತಾಳೆ.
ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ ಪಡೆಯಪ್ಪ ಸಿನಿಮಾ ನೋಡುವಾಗ ಈ ದೃಶ್ಯವನ್ನು ಕಂಡು ತಡೆಯಲಾರದೆ ಕಣ್ಣೀರು ಹಾಕಿದ ರಮ್ಯಾಕೃಷ್ಣ. ಪಡೆಯಪ್ಪ ಸಿನಿಮಾದಲ್ಲಿ ರಜನೀಕಾಂತ್ ಹೀರೋ ಆಗಿ ಕಾಣಿಸಿಕೊಂಡರೆ ಅದರ ಮೇನ ವಿಲನ್ ಆಗಿ ರಮ್ಯಾಕೃಷ್ಣ ಕಾಣಿಸಿಕೊಂಡಿದ್ದಾರೆ. ಅಂತಹ ಮಾಸ್ ಹೀರೋಗೆ ಟಕ್ಕರ್ ಕೊಡುವ ರೀತಿ ಕಾಣಿಸಿಕೊಂಡ ರಮ್ಯಾಕೃಷ್ಣ ಅವರು ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇತ್ತೀಚೆಗೆ ತೆಲುಗಿನ ನಟ ಜಗಪತಿ ಬಾಬು ನಡೆಸಿಕೊಡುವ ಟಾಕ್ ಶೋನಲ್ಲಿ ಅತಿಥಿಯಾಗಿ ರಮ್ಯಾಕೃಷ್ಣ ಬಂದಿದ್ದರು. ಆಗ ಪಡಿಯಪ್ಪ ಸಿನಿಮಾದ ಈ ಫೇಮಸ್ ದೃಶ್ಯವನ್ನು ಪ್ರಸಾರ ಮಾಡಿದಾಗ ದೃಶ್ಯ ನೋಡುತ್ತಿದ್ದಂತೆ ರಮ್ಯಾಕೃಷ್ಣಗೆ ಅಳು ತಡೆಯಲಿಕ್ಕೆ ಆಗಲಿಲ್ಲ. ಸೌಂದರ್ಯಳ ಬಗ್ಗೆ ಮಾತನಾಡುತ್ತಾ, ‘ಒಬ್ಬ ಮುಗ್ಧ ಹೆಣ್ಣು ಮಗು ಪ್ರಬುದ್ಧ ನಟಿ ಆಗಿದ್ದನ್ನು ನಾನು ಸೌಂದರ್ಯನಲ್ಲಿ ನೋಡಿದೆ. ಜನಪ್ರಿಯತೆ, ಯಶಸ್ಸು ಆಕೆಯ ಮುಗ್ಧತೆಯನ್ನು ಹಾಳು ಮಾಡಲಿಲ್ಲ. ಹೆಸರಿನಂತೆಯೇ ಆಕೆಯ ಮನಸ್ಸು ಸೌಂದರ್ಯದಿಂದ ಕೂಡಿತ್ತು.
ಆಕೆಯೊಂದಿಗೆ ಹಲವು ಒಳ್ಳೆಯ ನೆನಪುಗಳು ನನಗೆ ಇವೆ, ನನಗೆ ಬಹಳ ಆಪ್ತ ಗೆಳತಿ ಆಗಿದ್ದರು’ ಎಂದರು ರಮ್ಯಾಕೃಷ್ಣ. ಜಗಪತಿ ಬಾಬು ಹಾಗೂ ಸೌಂದರ್ಯ ಆಪ್ತರಾಗಿದ್ದರು. ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ ಕೂಡ. ಇಬ್ಬರೂ ವಿವಾಹ ಆಗಲಿದ್ದಾರೆ ಎಂಬ ಸುದ್ದಿಗಳು ಕೂಡಾ ಹರಿದಾಡಿದ್ದವು. ಕೆಲವು ಮೂಲಗಳ ಪ್ರಕಾರ ಇಬ್ಬರ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎನ್ನಲಾಗುತ್ತದೆ ಕೂಡ. ವಿಧಿ ಲಿಖಿತವೋ ಏನೋ ಮದುವೆ ಆಗಲಿಲ್ಲ.
2004 ರ ಏಪ್ರಿಲ್ ತಿಂಗಳಲ್ಲಿ ಒಂದು ಖಾಸಗಿ ವಿಮಾನ ಅಪಘಾತದಲ್ಲಿ ಸೌಂದರ್ಯ ಇಹಲೋಕ ತ್ಯಜಿಸಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದರು. ಮುಂದುವರೆದು ಮಾತನಾಡಿದ ರಮ್ಯಕೃಷ್ಣ
“ಆ ದೃಶ್ಯದಲ್ಲಿ ನಾನು ಪಾತ್ರದ ಭಾಗವಾಗಿ ಕಠೋರವಾಗಿ ನಡೆದುಕೊಂಡಿದ್ದರೂ, ಕ್ಯಾಮೆರಾ ಆಫ್ ಆದ ಕ್ಷಣ ಆಕೆಯನ್ನೇ ಮೊದಲಿಗೆಯಾಗಿ ಅಪ್ಪಿಕೊಂಡೆ. ಇಂದೂ ಆ ನೆನಪು ನನ್ನ ಮನಸ್ಸಿನಲ್ಲಿ ಜೀವಂತವಾಗಿದೆ.”
ಜಗಪತಿ ಬಾಬು ಕೂಡ ಭಾವುಕರಾದರು. ಅವರು ಸೌಂದರ್ಯ ಅವರನ್ನು ನೆನೆದು ಹೇಳಿದರು.
“ಅವರು ಕೇವಲ ಸಹನಟಿ ಅಲ್ಲ, ಒಳ್ಳೆಯ ಆತ್ಮ. ನಮ್ಮಿಬ್ಬರ ಮಧ್ಯೆ ಇದ್ದ ಸ್ನೇಹವನ್ನು ನಾನು ಇಂದಿಗೂ ಮರೆತಿಲ್ಲ.”


