ಕನ್ನಡದ ಜನಪ್ರಿಯ ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28ರಂದು ಆರಂಭಗೊಂಡ ಈ ಶೋನಲ್ಲಿ ಒಟ್ಟು 19 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟರು. ಆದರೆ, ಆರಂಭದಲ್ಲೇ ಬಿಗ್ ಬಾಸ್ ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಮೊದಲ ದಿನವೇ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿ ಎಲ್ಲರಿಗೂ ಆಘಾತ ನೀಡಿದ್ದಾರೆ. ತುಳುನಾಡಿನ ಜನಪ್ರಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರಿಗೆ ಗೇಟ್ ಪಾಸ್ ಸಿಕ್ಕಿದೆ.
ಶೋನ ಆರಂಭದಲ್ಲಿ ಸ್ಪರ್ಧಿಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಯಿತು. 6 ಸ್ಪರ್ಧಿಗಳು ಸಿಂಗಲ್ಸ್, 5 ಸ್ಪರ್ಧಿಗಳು ಜಂಟಿಗಳಾಗಿ ಮತ್ತು 3 ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮನೆಗೆ ಪ್ರವೇಶಿಸಿದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಮತ್ತು ಸ್ಪಂದನಾ ಅವರು ಅತಂತ್ರ ಸ್ಥಿತಿಯಲ್ಲಿದ್ದರು. ಈ ಮೂವರಲ್ಲಿ ಇಬ್ಬರನ್ನು ಮಾತ್ರ ಉಳಿಸಿಕೊಳ್ಳಬೇಕು, ಒಬ್ಬರನ್ನು ಹೊರಗೆ ಕಳುಹಿಸಬೇಕು ಎಂಬ ನಿಯಮ ಬಿಗ್ ಬಾಸ್ ಹೇರಿದರು. ಈ ನಿರ್ಧಾರದ ಅಧಿಕಾರವನ್ನು 6 ಒಂಟಿಗಳಿಗೆ ನೀಡಲಾಯಿತು. ಇದು ಶೋಗೆ ಹೊಸ ರೂಪ ನೀಡಿತ್ತು ಮತ್ತು ಸ್ಪರ್ಧಿಗಳ ನಡುವೆ ಆರಂಭದಲ್ಲೇ ಟೆನ್ಷನ್ ಸೃಷ್ಟಿಸಿತು.
ರಕ್ಷಿತಾ ಶೆಟ್ಟಿ ಅವರು ತುಳುನಾಡಿನ ಯೂಟ್ಯೂಬರ್ ಆಗಿದ್ದು, ಅವರ ವಿಡಿಯೋಗಳು ಹಾಸ್ಯ, ಸಾಮಾಜಿಕ ಸಂದೇಶಗಳು ಮತ್ತು ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಮುಂಬೈನಲ್ಲಿ ಬೆಳೆದ ಅವರು ಕನ್ನಡದೊಂದಿಗೆ ತುಳು ಭಾಷೆಯನ್ನು ಮಿಶ್ರಣ ಮಾಡಿ ಮಾತನಾಡುವ ಶೈಲಿ ಅವರನ್ನು ಜನಪ್ರಿಯಗೊಳಿಸಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಅವರು ಉತ್ಸಾಹದಿಂದ ತಮ್ಮನ್ನು ಪರಿಚಯಿಸಿಕೊಂಡರು. ಆದರೆ, ಆರಂಭದ ಟಾಸ್ಕ್‌ಗಳು ಮತ್ತು ನಿಯಮಗಳು ಅವರಿಗೆ ದೊಡ್ಡ ಸವಾಲು ಒಡ್ಡಿದವು. ಮೊದಲ ದಿನವೇ ಎಲಿಮಿನೇಟ್ ಆಗಿದ್ದಾರೆ..


