Top Newsದೇಶ/ವಿದೇಶಸಿನಿಮಾಸುದ್ದಿ

ಸೈಕೋ ಪ್ರೇಮಿ;ಕೊಲೆ ಮಾಡಿ ‘ಧೂಪ’ ಬೆಳಗಿ ಪ್ರೇಯಸಿ ಆತ್ಮಕ್ಕೆ ಕಾದಿದ್ದ ಕಿಲರ್!

ಮಧ್ಯಪ್ರದೇಶ: ಇಂದೋರ್‌ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿ ಪಿಯೂಷ್ ಧಮ್ನೋಟಿಯಾ ತನ್ನ ಪ್ರೇಯಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆಂಬ ಸಂಶಯದಿಂದ ಉಡುಗೊರೆ ನೀಡುವ ನೆಪದಲ್ಲಿ ಆಕೆಯನ್ನು ರೂಮಿಗೆ ಕರೆಸಿಕೊಂಡ ಈತ, ಆಕೆಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿದ್ದಾನೆ. ನಂತರ ಆಕೆ ಪ್ರಜ್ಞೆ ಕಳೆದುಕೊಂಡಾಗ ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಬಲವಾಗಿ ಇರಿದಿದ್ದಾನೆ. ಈ ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಆತ ಬಳಸಿದ ಚಾಕು ಕೂಡ ಮುರಿದು ಹೋಗಿದೆ.

ಕೊಲೆಯ ನಂತರ ಆರೋಪಿಯ ವರ್ತನೆ ಅತ್ಯಂತ ವಿಕೃತವಾಗಿತ್ತು. ಆತ ಶವದ ಪಕ್ಕದಲ್ಲೇ ಕುಳಿತು ಮದ್ಯಪಾನ ಮಾಡಿದ್ದಲ್ಲದೆ, ನಿರ್ಜೀವ ದೇಹದ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾನೆ. ಬಳಿಕ ಯುವತಿಯ ಮೊಬೈಲ್‌ನಿಂದ ಆಕೆಯ ತಂದೆಗೆ ‘ನಾನು ಮನೆಗೆ ಬರುವುದಿಲ್ಲ’ ಎಂದು ಮೆಸೇಜ್ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಇಬ್ಬರೂ ಒಟ್ಟಿಗೆ ರೂಮಿಗೆ ಹೋಗಿರುವುದು ಮತ್ತು ಎರಡು ಗಂಟೆಯ ನಂತರ ಆರೋಪಿ ಒಬ್ಬನೇ ಬ್ಯಾಗ್ ಹೊತ್ತು ಹೊರಬಂದಿರುವುದು ಪತ್ತೆಯಾಗಿದೆ.

ಕೊಲೆ ಮಾಡಿದ ನಂತರ ಆರೋಪಿ ಮುಂಬೈಗೆ ಪರಾರಿಯಾಗಿದ್ದರೂ, ಅಲ್ಲಿ ಕುಳಿತು ಯೂಟ್ಯೂಬ್‌ನಲ್ಲಿ ‘ಸತ್ತವರ ಆತ್ಮದೊಂದಿಗೆ ಸಂವಹನ ಮಾಡುವುದು ಹೇಗೆ?’ ಎಂದು ಹುಡುಕಾಡಿದ್ದಾನೆ. ತಾನು ಮಾಡಿದ ತಪ್ಪಿಗೆ ಆಕೆಯ ಆತ್ಮದ ಬಳಿ ಕ್ಷಮೆ ಕೇಳಲು ಬಯಸಿದ್ದಾಗಿ ಆತ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಸದ್ಯ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಈ ಆರೋಪಿಯ ಸೈಕೋ ವರ್ತನೆ ಕಂಡು ಪೊಲೀಸರೇ ದಂಗಾಗಿದ್ದಾರೆ.

Comments (0)

Your email address will not be published. Required fields are marked *

Back to top button