ಭಾರತದ ತಾರಾ ಚೆಸ್ ಪಟು ಅರ್ಜುನ್ ಎರಿಗೈಸಿಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಚೆಸ್ ಲೈವ್ ರ್‍ಯಾಂಕಿಂಗ್ ಪಟ್ಟಿಯಲ್ಲಿ 2800 ಅಂಕ ತಲುಪಿದ ಭಾರತದ ಗ್ರಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಲೈವ್ ರ್‍ಯಾಂಕಿಂಗ್‌ನಲ್ಲಿ 2800 ಅಂಕ ಗಳಿಸಿದ ಅರ್ಜುನ್‌ಗೆ ಅಭಿನಂದನೆಗಳು. ಇದೊಂದು ಅಪೂರ್ವ ಸಾಧನೆ. ಅವರ ವಿಶೇಷ ಕೌಶಲ್ಯ ಹಾಗೂ ಪರಿಶ್ರಮ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಅವರು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ. ಅರ್ಜುನ್ ಭವಿಷ್ಯ ಉಜ್ವಲವಾಗಲಿ’ ಎಂದು ಹಾರೈಸಿದ್ದಾರೆ.
ಅರ್ಜುನ್ 2800 ಅಂಕ ತಲುಪಿದ ಭಾರತದ ಕೇವಲ 2ನೇ, ವಿಶ್ವದ 14ನೇ ಆಟಗಾರ. 5 ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಕೂಡಾ ಈ ಸಾಧನೆ ಮಾಡಿದ್ದರು.
13ನೇ ಏಷ್ಯನ್ ನೆಟ್‌ಬಾಲ್: ಸಿಂಗಾಪೂರ ಚಾಂಪಿಯನ್
ಬೆಂಗಳೂರು: 13ನೇ ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಾಪೂರ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸಿಂಗಾಪೂರ 67-64 ಅಂಕಗಳಿಂದ ಜಯಗಳಿಸಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಮಲೇಷ್ಯಾ ಜಯಗಳಿಸಿತು. ಟೂರ್ನಿಯಲ್ಲಿ ಭಾರತ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ವಿಧಾನಪರಿಷತ್ ಸದಸ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಸೇರಿ ಪ್ರಮುಖರು ಉಪಸ್ಥಿತರಿದ್ದರು.