Tuesday, March 3, 2026
20.2 C
Bengaluru
Google search engine
LIVE
ಮನೆSportsಪಾಕ್ ಕ್ರಿಕೆಟಿಗರಿಗೆ ಪಿಸಿಬಿ ಚಾಟಿ;ವಿಶ್ವಕಪ್ ವೈಫಲ್ಯಕ್ಕೆ ತಲಾ 50 ಲಕ್ಷ ದಂಡ

ಪಾಕ್ ಕ್ರಿಕೆಟಿಗರಿಗೆ ಪಿಸಿಬಿ ಚಾಟಿ;ವಿಶ್ವಕಪ್ ವೈಫಲ್ಯಕ್ಕೆ ತಲಾ 50 ಲಕ್ಷ ದಂಡ

ಟಿ20 ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಪಾಕಿಸ್ತಾನ್ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಭಾರಿ ಶಾಕ್ ನೀಡಿದೆ. ಟೂರ್ನಿಯ ಸೂಪರ್-8 ಹಂತಕ್ಕೇರಲು ವಿಫಲವಾಗಿ ಹೊರಬಿದ್ದಿದ್ದ ಬಾಬರ್ ಪಡೆಗೆ ಈಗ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ದಂಡದ ಬಿಸಿ ಮುಟ್ಟಿಸಿದ್ದಾರೆ. ಕಳಪೆ ಆಟ ಪ್ರದರ್ಶಿಸಿದ ತಂಡದ ಪ್ರತಿಯೊಬ್ಬ ಆಟಗಾರನಿಗೂ ಬರೋಬ್ಬರಿ 50 ಲಕ್ಷ ರೂಪಾಯಿ ದಂಡ ವಿಧಿಸಲು ಮಂಡಳಿ ನಿರ್ಧರಿಸಿದ್ದು, ಆಟಗಾರರ ಬೇಜವಾಬ್ದಾರಿತನಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಕೇವಲ ಆರ್ಥಿಕ ದಂಡ ಮಾತ್ರವಲ್ಲದೆ, ತಂಡದ ಪ್ರಮುಖ ಆಟಗಾರರಾದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಕೇಂದ್ರ ಒಪ್ಪಂದದ ಗ್ರೇಡ್ ಅನ್ನು ಸಹ ಕಡಿತಗೊಳಿಸಲಾಗಿದೆ. ಈ ಇಬ್ಬರು ಸ್ಟಾರ್ ಆಟಗಾರರು ‘A’ ಗ್ರೇಡ್‌ನಿಂದ ‘B’ ಗ್ರೇಡ್‌ಗೆ ಕುಸಿತ ಕಂಡಿದ್ದಾರೆ. ಇನ್ನು ಮುಂದೆ ಆಟಗಾರರಿಗೆ ಸಿಗುವ ಆರ್ಥಿಕ ಲಾಭಗಳು ಕೇವಲ ಅವರ ಮೈದಾನದ ಪ್ರದರ್ಶನಕ್ಕೆ ತಕ್ಕಂತೆ ಮಾತ್ರ ಇರಲಿವೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಈ ಮೂಲಕ ಸ್ಟಾರ್ ಪಟ್ಟ ನಂಬಿಕೊಂಡು ಕಳಪೆ ಆಟವಾಡುವವರಿಗೆ ಮಂಡಳಿ ಎಚ್ಚರಿಕೆ ನೀಡಿದೆ.

ಆಟಗಾರರಿಗೆ ಸಿಗುತ್ತಿದ್ದ ಹೆಚ್ಚುವರಿ ಸವಲತ್ತುಗಳಿಗೂ ಪಿಸಿಬಿ ಕತ್ತರಿ ಹಾಕಿದೆ. ವಿದೇಶಿ ಲೀಗ್‌ಗಳಲ್ಲಿ ಆಡಲು ಆಟಗಾರರಿಗೆ ನೀಡಲಾಗುತ್ತಿದ್ದ ಅನಾಕ್ಷೇಪಣಾ ಪತ್ರ ನೀಡುವ ಪ್ರಕ್ರಿಯೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಆಟಗಾರರು ತಮ್ಮ ವೈಯಕ್ತಿಕ ಲಾಭಕ್ಕಾಗಿ ವಿದೇಶಿ ಲೀಗ್‌ಗಳಿಗೆ ಆದ್ಯತೆ ನೀಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ದೇಶಕ್ಕಾಗಿ ಆಡುವಾಗ ಶಿಸ್ತು ಮತ್ತು ಬದ್ಧತೆ ತೋರದೇ ಇದ್ದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮೊಹ್ಸಿನ್ ನಖ್ವಿ ಎಚ್ಚರಿಸಿದ್ದಾರೆ. s

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments