
ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯು ವಿಫಲವಾಗಿದ್ದು, ಅಮೆರಿಕಾ ಮತ್ತು ಇರಾನ್ ನಡುವಿನ ಜಗಳಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವದ ರಾಷ್ಟ್ರಗಳು ಈಗ ಭಾರತದತ್ತ ದೃಷ್ಟಿ ನೆಟ್ಟಿವೆ, ಏಕೆಂದರೆ ಭಾರತವು ಅಮೆರಿಕಾ ಮತ್ತು ಇರಾನ್ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವರ್ಚಸ್ವಿ ನಾಯಕರಾಗಿ ಹೊರಹೊಮ್ಮಿದ್ದು, ಈಗಾಗಲೇ ಇರಾನ್ ವಿದೇಶಾಂಗ ಸಚಿವರು ಅವರೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ.
ಭಾರತವು ಮೊದಲಿನಿಂದಲೂ ಶಾಂತಿಗೆ ಒತ್ತು ನೀಡುತ್ತಾ ಬಂದಿದ್ದು, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಪ್ರಧಾನಿ ಮೋದಿಯವರ ಆಪ್ತ ಸ್ನೇಹಿತರಾಗಿರುವುದು ಸಂಧಾನದ ಆಸೆಯನ್ನು ಹೆಚ್ಚಿಸಿದೆ. ಪಾಕಿಸ್ತಾನದ ವಿಶ್ವಾಸಾರ್ಹತೆ ಕಡಿಮೆಯಿರುವುದರಿಂದ ಇಸ್ರೇಲ್ ಆ ದೇಶವನ್ನು ನಂಬುತ್ತಿಲ್ಲ, ಹೀಗಾಗಿ ವಿಶ್ವದ ಬೃಹತ್ ಸೇನಾ ಶಕ್ತಿಗಳಲ್ಲಿ ಒಂದಾಗಿರುವ ಭಾರತದ ರಾಜತಾಂತ್ರಿಕ ನಡೆಯೇ ಈಗ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಇರಾನ್ ಮತ್ತು ಅಮೆರಿಕಾ ಸಂಘರ್ಷ ಮುಂದುವರಿದರೆ ಭಾರತಕ್ಕೆ ದೊಡ್ಡ ಆರ್ಥಿಕ ಹೊಡೆತ ಬೀಳುವ ಸಾಧ್ಯತೆಯಿದ್ದು, ದೇಶದಲ್ಲಿ ಲಾಕ್‌ಡೌನ್‌ನಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಈಗಾಗಲೇ ಗ್ಯಾಸ್ ಮತ್ತು ಪೆಟ್ರೋಲ್ ಕೊರತೆಯಿಂದ ದೈನಂದಿನ ಚಟುವಟಿಕೆಗಳು ಕುಂಠಿತಗೊಳ್ಳುತ್ತಿದ್ದು, ವಿಶೇಷವಾಗಿ ಆಟೋ ಎಲ್‌ಪಿಜಿ ಸಿಗದೆ ರಿಕ್ಷಾ ಚಾಲಕರು ಪರದಾಡುತ್ತಿರುವುದು ಸಂಘರ್ಷದ ದುಷ್ಪರಿಣಾಮಕ್ಕೆ ಸಾಕ್ಷಿಯಾಗಿದೆ.




