ಖ್ಯಾತ ನಟಿಯೊಬ್ಬಳು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ದುರಂತ ಪಾಕಿಸ್ತಾನದಲ್ಲಿ ನಡೆದಿದೆ. ಕರಾಚಿಯ ಅಪಾರ್ಟ್ಮೆಂಟ್ ಒಂದರಲ್ಲಿ ನೆಲೆಸಿದ್ದ ಅಲ್ಲಿನ ಖ್ಯಾತ ನಟಿ ಹುಮೈರಾ ಅಸ್ಗರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 2 ವಾರದ ಹಿಂದೆಯೇ ಹುಮೈರಾ ಅಸ್ಗರ್ ಸಾವನ್ನಪ್ಪಿದ್ದು, ಇದೀಗ ತಡವಾಗಿ ಆಕೆಯ ಮೃತದೇಹ ಪತ್ತೆಯಾಗಿದೆ.
ಹುಮೈರಾ ಅಸ್ಗರ್ ಉರ್ದುವಿನ ಜಲೈಬಿ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ತಮಾಷಾ ಘರ್ ಎಂಬ ರಿಯಾಲಿಟಿ ಶೋನಲ್ಲೂ ಪಾಲ್ಗೊಳ್ಳುತ್ತಿದ್ದರು. 2 ವಾರದ ಹಿಂದೆಯೇ ಹುಮೈರಾ ಸಾವನ್ನಪ್ಪಿದ್ದು ಆಕೆಯ ಮೃತದೇಹ ಸಂಪೂರ್ಣ ಕೊಳೆತುಹೋಗಿತ್ತು. ಇಷ್ಟಾದರೂ ಆಕೆಯ ಮೃತದೇಹದ ವಾಸನೆ ಮನೆಯಿಂದ ಹೊರಗಡೆ ಬಂದಿರಲಿಲ್ಲ. ಆದರೆ ಈಚೆಗೆ ವಾಸನೆ ಹೆಚ್ಚು ಬಂದ ಕಾರಣ ಅನುಮಾನದಿಂದ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಫ್ಲ್ಯಾಟ್ನ ಬೀಗ ಒಡೆದಾಗ ಹುಮೈರಾ ಅಸ್ಗರ್ ಮೃತದೇಹ ಸಂಪೂರ್ಣ ಕೊಳೆತುಹೋಗಿತ್ತು.
ಸದ್ಯ ಪೊಲೀಸರು ನಟಿಯ ಸಾವಿಗೆ ಕಾರಣಗಳನ್ನ ಹುಡುಕುತ್ತಿದ್ದಾರೆ.