Wednesday, June 25, 2025
26.4 C
Bengaluru
Google search engine
LIVE
ಮನೆ#Exclusive Newsಹೊಸ ದಾಖಲೆ: ಒಂದೇ ಚೆಸ್‌ ಪಂದ್ಯದಲ್ಲಿ 60000+ ಎದುರಾಳಿಗಳ ಸೋಲಿಸಿದ ವಿಶ್ವನಾಥನ್‌ ಆನಂದ್‌!

ಹೊಸ ದಾಖಲೆ: ಒಂದೇ ಚೆಸ್‌ ಪಂದ್ಯದಲ್ಲಿ 60000+ ಎದುರಾಳಿಗಳ ಸೋಲಿಸಿದ ವಿಶ್ವನಾಥನ್‌ ಆನಂದ್‌!

ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್, ಒಂದೇ ಪಂದ್ಯದಲ್ಲಿ ಆನ್‌ಲೈನ್ ಮೂಲಕ 60 ಸಾವಿರ ಸ್ಪರ್ಧಾಳುಗಳನ್ನು ಸೋಲಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ: 5 ಬಾರಿ ಚೆಸ್‌ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅವರು ಆನ್‌ಲೈನ್‌ ಮೂಲಕ ನಡೆದ ಒಂದೇ ಚೆಸ್‌ ಪಂದ್ಯದಲ್ಲಿ ಬರೋಬ್ಬರಿ 60,000ಕ್ಕೂ ಹೆಚ್ಚು ಪ್ರತಿಸ್ಪರ್ಧಿಗಳನ್ನು ಸೋಲಿಸಿ ಗಮನ ಸೆಳೆದಿದ್ದಾರೆ.

ವಿಶ್ವದ ಅತಿದೊಡ್ಡ ಚೆಸ್ ಸಂಸ್ಥೆಗಳಲ್ಲಿ ಒಂದಾದ ಚೆಸ್‌ ಡಾಟ್‌ ಕಾಮ್‌, ‘ವಿಶಿ ಮತ್ತು ವಿಶ್ವ’ ಹೆಸರಲ್ಲಿ ಈ ವಿಶೇಷ ಪಂದ್ಯ ಆಯೋಜಿಸಿತ್ತು. ಸುಮಾರು 60 ಸಾವಿರಕ್ಕೂ ಹೆಚ್ಚು ಚೆಸ್‌ ಪಟುಗಳು ಸ್ಪರ್ಧೆಗೆ ಹೆಸರು ನೋಂದಾಯಿಸಿದ್ದರು.

ಸೆ.30ರಂದು ಈ ಪಂದ್ಯ ಆರಂಭಗೊಂಡಿತ್ತು. ವಿಶ್ವನಾಥನ್‌ ಅವರು ಬಿಳಿ ಕಾಯಿ, ಪ್ರತಿಸ್ಪರ್ಧಿಗಳೆಲ್ಲಾ ಕಪ್ಪು ಕಾಯಿಯೊಂದಿಗೆ ಆಡಿದ್ದರು. ಎಲ್ಲಾ ಸ್ಪರ್ಧಿಗಳಿಗೂ ಪ್ರತಿ ದಿನಕ್ಕೆ ಒಂದು ಬಾರಿ ತಮ್ಮ ಕಾಯಿ ಚಲಾಯಿಸಲು ಅವಕಾಶ ನೀಡಲಾಗಿತ್ತು. ವಿಶ್ವನಾಥನ್‌ ಅವರು 24 ದಿನಗಳ, 24 ಮೂವ್‌ಗಳಲ್ಲಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದಾರೆ.

ಈ ಹಿಂದೆ 1999ರಲ್ಲಿ ರಷ್ಯಾದ ಗ್ಯಾರಿ ಕ್ಯಾಸ್ಪರೊವ್‌ ವಿಶ್ವದೆಲ್ಲೆಡೆಯ 50 ಸಾವಿರ ಪ್ರತಿಸ್ಪರ್ಧಿಗಳನ್ನು ಇದೇ ರೀತಿ 4 ತಿಂಗಳಲ್ಲಿ, 62 ಮೂವ್‌ಗಳಲ್ಲಿ ಸೋಲಿಸಿದ್ದರು. ಆ ಪಂದ್ಯದ 25ನೇ ವಾರ್ಷಿಕೋತ್ಸವ ಅಂಗವಾಗಿ ‘ವಿಶಿ ಮತ್ತು ವಿಶ್ವ’ ಪಂದ್ಯ ಆಯೋಜಿಸಲಾಗಿತ್ತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments