Top Newsಜಿಲ್ಲೆ

ನೀಟ್ ಪರೀಕ್ಷೆಯಲ್ಲೂ ಜನಿವಾರ ವಿವಾದ – ಆಕ್ರೋಶ ಸ್ಫೋಟ

ಜನಿವಾರ-ಶಿವದಾರ ವಿವಾದ ಮತ್ತೆ ಮತ್ತೆ ಸದ್ದು ಮಾಡ್ತಿದೆ. ಕಲಬುರಗಿಯಲ್ಲಿ ನೀಟ್ ಪರೀಕ್ಷೆಯಲ್ಲಿಯೂ ಬಲವಂತವಾಗಿ ಪರೀಕ್ಷಾರ್ಥಿಯಿಂದ ಜನಿವಾರ ತೆಗೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ಕಲಬುರಗಿಯ ಸಂತ ಮೇರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ಗದ ಶ್ರೀಪಾದ್ ಪಾಟೀಲ್ ಎಂಬ ವಿದ್ಯಾರ್ಥಿಯ ಜನಿವಾರವನ್ನು ಅಧಿಕಾರಿಗಳು ತೆಗೆಸಿದ್ದಾರೆ. ಬಳಿಕವೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ವಿಷಯ ಬೆಳಕಿಗೆ ಬಂದ ತಕ್ಷಣ ಕಲಬುರಗಿಯಲ್ಲಿ ಬ್ರಾಹ್ಮಣ ಸಮುದಾಯದ ನೂರಾರು ಮಂದಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಜನಿವಾರ ತೋರಿಸುತ್ತಾ ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಏಕೆ ತರುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ರು. ಜನಿವಾರ ತೆಗೆಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ರು

ಅಂದ ಹಾಗೇ, ನೀಟ್ ಪರೀಕ್ಷೆಯ ಹಾಲ್ ಟಿಕೆಟ್​​ನಲ್ಲಿ ಇರುವ ನಿಯಮಗಳ ಅನುಸಾರ ಬಳೆ, ಸರ, ಕಿವಿಯೋಲೆ, ಮೂಗುತಿ ಧರಿಸುವಂತೆ ಇರಲಿಲ್ಲ. ತುಂಬ ತೋಳಿನ ಶರ್ಟ್, ಹೈ ಹೀಲ್ಸ್ ಚಪ್ಪಲಿ ಧರಿಸುವಂತೆ ಇರಲಿಲ್ಲ. ಆದರೆ, ಎಲ್ಲಿಯೂ ಜನಿವಾರ ಇರಬೇಕು.. ಇರಬಾರದು ಎಂಬ ಪ್ರತ್ಯೇಕ ನಿಯಮ ಇರಲಿಲ್ಲ

Comments (0)

Your email address will not be published. Required fields are marked *

Back to top button