ರಾಜ್ಯಸುದ್ದಿಹಣಕಾಸು

ಮಗು ನೊಡಲು ಹೆಂಡತಿ ಮನೆಗೆ ತೆರಳಿದ್ದ ಗಂಡ : ವಾಪಸ್‌ ಮನೆಗೆ ಬಂದಾಗ ಮಾಯ ಆಗಿದ್ದೇನು?

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ನವೀನ್ ಎಂಬುವವರು ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ವಾಸವಿದ್ದಾರೆ. ಪತ್ನಿ ಬಾಣಂತಿ ಆಗಿದ್ದರಿಂದ ಕಳೆದ ಎರಡು ದಿನದ ಹಿಂದೆ ತವರು ಮನೆಗೆ ತೆರಳಿದ್ದರು. ಈ ಮಧ್ಯೆ ಮಗುವಾಗಿದೆ. ಹೀಗಾಗಿ ಹೆಂಡತಿ ಹಾಗೂ ಮಗುವನ್ನ ನೊಡಿ ಬರಲು ನವೀನ್ ತಮ್ಮ ತಾಯಿ ಜೊತೆಗೆ ತೆರಳಿದ್ದಾರೆ.

ಅತ್ತ ನವೀನ್​​ ಹೋಗುತ್ತಿದ್ದಂತೆ ಹೊಂಚು ಹಾಕಿ ಕುಳಿತ್ತಿದ್ದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮನೆ ಬಾಗಿಲು ಮುರಿದು ಒಳಕ್ಕೆ ನುಗ್ಗಿ ಕಳ್ಳರು ನಗದು ಸೇರಿದಂತೆ ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ನವೀನ್​ ತಮ್ಮ ಹೆಂಡತಿ ಊರಿಗೆ ತೆರಳಿದ 24 ಗಂಟೆಯೊಳಗೆ ಅನಾಹುತ ನಡೆದಿದೆ.

ಮನೆ ಎದುರಿನ ನಿವಾಸಿ ಸಿಸಿಟಿವಿ ಮುರಿದು ಹೋಗಿರುವುದನ್ನ ಗಮನಿಸಿ ನವೀನ್​ಗೆ ಕರೆ ಮಾಡಿದ್ದಾರೆ. ಈ ವೇಳೆ ವಿಡಿಯೋಕಾಲ್ ಮೂಲಕ ನೋಡಿದಾಗ ಮನೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳು ಮನೆ ಮುಂದೆ ಓಡಾಡಿರುವ ಪತ್ತೆ ಆಗಿದೆ. ಬೆಳಿಗ್ಗೆ ಮನೆ ಮುಂದೆ ಮೂವರು ಅಪರಿಚಿತ ಓಡಾಡಿದ್ದು, ರಾತ್ರಿ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

Comments (0)

Your email address will not be published. Required fields are marked *

Back to top button