ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳೇ ಆಲೂರು ಗ್ರಾಮದ ಮನೆಯೊಂದರಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿ, ಸ್ಫೋಟದ ರಭಸಕ್ಕೆ ಮನೆ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯಲ್ಲಿ ಇದ್ದ ದಂಪತಿ ಸುದರ್ಶನ್ ಆಚಾರ್, ಕಾವ್ಯಗೆ ಗಂಭೀರ ಗಾಯಗಳಾಗಿವೆ..
ಸುದರ್ಶನ್ ಆಚಾರ್ ಅವರ ಎರಡು ಕಾಲುಗಳಿಗೂ ಭಾರೀ ಪೆಟ್ಟು ಬಿದ್ದಿದೆ. ಗಾಯಾಳುಗಳಾದ ಸುದರ್ಶನ್ ಆಚಾರ್, ಕಾವ್ಯಾ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಂಪತಿಯನ್ನು ಕರೆದೊಯ್ಯಲಾಗಿದೆ. ಇನ್ನ ರಜಾ ಕಾರಣ ಮಾವನ ಮನೆಗೆ ಬಂದಿದ್ದ ಸುದರ್ಶನ್ ಅಕ್ಕನ ಮಗ ಗೌತಮ್ಗೆ ಸಣ್ಣ ಪುಟ್ಟ ಗಾಯಗಳಾಗಿ ಯಾವುದೇ ತೊಂದರೆಗಳಾಗಿಲ್ಲ.
ಪತಿ.. ಪತ್ನಿ ಇಬ್ಬರೂ ಸಾವು ಬದುಕಿನ ಮಧ್ಯೆ ಹೋರಾಟದಲ್ಲಿದ್ದಾರೆ. ಸ್ಫೋಟಗೊಂಡ ಮನೆಗೆ ಭೇಟಿ ನೀಡಿದ ಜನರಲ್ಲಿ ಕೆಲವ್ರು ಸಿಲಿಂಡರ್ ಅಂತಿದ್ರೆ.. ಇನ್ನೂ ಕೆಲವ್ರು ಗೀಸರ್ ಅಂತಿದ್ರು.. ಆದ್ರೆ ಈ ನಿಗೂಡ ಸ್ಫೋಟದ ಸತ್ಯ ಆಲೂರು ಪೊಲೀಸರ ತನಿಖೆ ಬಳಿಕವಷ್ಟೇ ಹೊರ ಬರಬೇಕಿದೆ.


