ಹುಬ್ಬಳ್ಳಿ: ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇರಾನ್ ಪರಮೋಚ್ಚ ನಾಯಕ ಖಮೇನಿ ಹತ್ಯೆ ಖಂಡಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಪ್ರತಿಭಟನೆಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಕೆಲವರು ಖಮೇನಿಯನ್ನು ಮಹಾತ್ಮ ಗಾಂಧೀಜಿಯವರಿಗೆ ಹೋಲಿಸುತ್ತಿರುವುದನ್ನು ಕಟುವಾಗಿ ಟೀಕಿಸಿದ ಮುತಾಲಿಕ್, ಗಾಂಧೀಜಿಯವರು ಅಹಿಂಸಾವಾದಿಯಾಗಿದ್ದರು, ಆದರೆ ಖಮೇನಿ ಒಬ್ಬ ಕ್ರೂರ ಹಿಂಸಾವಾದಿ. ಅಂತಹ ವ್ಯಕ್ತಿಯನ್ನು ಗಾಂಧೀಜಿಯವರ ಜೊತೆ ಹೋಲಿಸುವುದು ದೇಶಕ್ಕೆ ಮಾಡುವ ಅಪಮಾನ ಎಂದು ಗುಡುಗಿದ್ದಾರೆ. ಶಾಸಕ ಹ್ಯಾರಿಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜನರಿಗೆ ತೊಂದರೆ ನೀಡುತ್ತಿರುವುದನ್ನು ಬಲವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ.
ಖಮೇನಿ ಒಬ್ಬ ಸರ್ವಾಧಿಕಾರಿಯಾಗಿದ್ದು, ತನ್ನ ಆಡಳಿತಾವಧಿಯಲ್ಲಿ ಮಹಿಳೆಯರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದ್ದನು. ಮಹಿಳೆಯರ ಬಗ್ಗೆ ಗೌರವವೇ ಇಲ್ಲದ ಇಂತಹ ವ್ಯಕ್ತಿಯ ಪರವಾಗಿ ಭಾರತದಲ್ಲಿರುವ ಮುಸ್ಲಿಮರು ಪ್ರತಿಭಟನೆ ಮಾಡುವುದು ದೇಶಕ್ಕೆ ಶೋಭೆ ತರುವಂಥದ್ದಲ್ಲ. ರಾಕ್ಷಸ ಪ್ರವೃತ್ತಿಯ ವ್ಯಕ್ತಿಯ ಬಗ್ಗೆ ಕರುಣೆ ತೋರಿಸುವ ಅಗತ್ಯವಿಲ್ಲ ಎಂದು ಮುತಾಲಿಕ್ ಕಿಡಿಕಾರಿದ್ದಾರೆ


