Friday, February 20, 2026
19.1 C
Bengaluru
Google search engine
LIVE
ಮನೆದೇಶ/ವಿದೇಶಕರಾಚಿಯಲ್ಲಿ ಭೀಕರ ಸ್ಫೋಟ; ರಂಜಾನ್ ದಿನವೇ 16 ಮಂದಿ ಬಲಿ!

ಕರಾಚಿಯಲ್ಲಿ ಭೀಕರ ಸ್ಫೋಟ; ರಂಜಾನ್ ದಿನವೇ 16 ಮಂದಿ ಬಲಿ!

ಪಾಕಿಸ್ತಾನ: ಕರಾಚಿಯಲ್ಲಿ ರಂಜಾನ್ ಹಬ್ಬದ ಮೊದಲ ದಿನವೇ ಭಾರಿ ದುರಂತವೊಂದು ಸಂಭವಿಸಿದ್ದು, ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾದ ಪ್ರಬಲ ಸ್ಫೋಟಕ್ಕೆ ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 16 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶದ ಕಟ್ಟಡದ ಮೊದಲ ಮಹಡಿಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಕಟ್ಟಡದ ಒಂದು ಭಾಗ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಡುಗೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಅನಿಲ ಸೋರಿಕೆಯಾದ ಕಾರಣ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಆತಂಕವಿದೆ.

ಸದ್ಯಕ್ಕೆ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇವರಲ್ಲಿ ಏಳು ಮಕ್ಕಳು ಸೇರಿರುವುದು ಘಟನೆಯ ಭೀಕರತೆಯನ್ನು ಹೆಚ್ಚಿಸಿದೆ. ಕಳೆದ ತಿಂಗಳಷ್ಟೇ ಕರಾಚಿಯ ಗುಲ್ ಶಾಪಿಂಗ್ ಪ್ಲಾಜಾದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 79 ಮಂದಿ ಮೃತಪಟ್ಟಿದ್ದರು, ಈಗ ಮತ್ತೆ ಅನಿಲ ಸೋರಿಕೆಯಿಂದ ಇಷ್ಟೊಂದು ದೊಡ್ಡ ಮಟ್ಟದ ಸಾವು-ನೋವು ಸಂಭವಿಸಿರುವುದು ಕರಾಚಿಯ ವಸತಿ ಸಂಕೀರ್ಣಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments