ಜಿಲ್ಲೆ

ಮೇಲುಕೊಟೆಯ ಶಿಕ್ಷಕಿ ಕೊಲೆ ಪ್ರಕರಣ‌ : ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಎಸ್ಪಿ.

ಮಂಡ್ಯ : ಎಸ್​​ಇಟಿ ಶಾಲೆಯ ಶಿಕ್ಷಕಿಯನ್ನು ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿ ತಲೆ ಮರೆಸಿಕೊಂಡಿದ್ದ ಆರೋಪಿ ನಿತೀಶ್​ನನ್ನು ಮಂಡ್ಯ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಇನ್ನು ಈ ಘಟನೆಯ ಬಗ್ಗೆ ಎಸ್ಪಿ. ಸಂಪೂರ್ಣ ಮಾಹಿತಿ ಬಿಚ್ಚಿಟ್ಟರು.  ದೀಪಿಕಾ ಹಾಗೂ ನಿತೀಶ್ ನಡುವೆ ವರ್ಷದಿಂದ ಸ್ನೇಹ ಇತ್ತು. ದಿನ ನಿತ್ಯ ಕಾಲ್, ಮೆಸೇಜ್ ಚಾಟ್ ನಲ್ಲಿ ಇಬ್ಬರು ನಿರತರಾಗುತ್ತಿದ್ದರು. ಆಗಾಗ ಭೇಟಿ ಸಹ ಆಗುತ್ತಿದ್ದ ದೀಪಿಕಾ, ನಿತೀಶ್. ಆದ್ರೆ ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಇದ್ದಿದ್ದು, ಆಗಾಗ ಇಬ್ಬರ ನಡುವೆ ಜಗಳ ಆಗ್ತಿತ್ತು. ನಾನು ಭೇಟಿ ಮಾಡು ಎಂದಾಗ ದೀಪಿಕಾ ಸಿಗುತ್ತಿರಲಿಲ್ಲ. ಆದ್ರೆ ಆಕೆ ಕರೆದಾಗ ನಿತೀಶ್ ಹೋಗಲೇ ಬೇಕಿತ್ತು. ಇದರಿಂದ ಜ.20 ರಂದು ಮೀಟ್ ಮಾಡಲು ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿಗೆ ಕರೆದಿದ್ದ.

ಅದಲ್ಲದೇ ದೀಪಿಕಾ ಬೆಟ್ಟದ ತಪ್ಪಲಿಗೆ ಬರುವ ಮುನ್ನವೇ ಹೂತುಹಾಕಲು ಗುಂಡಿ ತೆಗೆದಿದ್ದ. ದೀಪಿಕಾ ಬರ್ತಿದ್ದಂತೆ ಜಗಳ ತೆಗೆದು, ಆಕೆಯ ವೇಲ್ ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ಕೊಲೆ ಮಾಡಿ ಗುಂಡಿಯಲ್ಲಿ ಹೂತು ಹಾಕಿದ್ದ. ಕೊಲೆ ಮಾಡಿದ ದಿನ ಊರಿಗೆ ತೆರಳಿ ಮೈಸೂರಿಗೆ ಕೆಲಸಕ್ಕೂ ತೆರಳಿದ್ದ.
ಶವ ಪತ್ತೆಯಾಗ್ತಿದ್ದಂತೆ ಊರಿಂದ ಎಸ್ಕೇಪ್ ಆಗಿದ್ದು, ಹೊಸಪೇಟೆಯಲ್ಲಿ ಆರೋಪಿ ಬಂಧಿಸಿ ಕರೆತಂದಿದ್ದೇವೆ.
ವಿಚಾರಣೆಯಲ್ಲಿ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ರು.

Comments (0)

Your email address will not be published. Required fields are marked *

Back to top button