ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಧ್ಯಮದವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮಾಡುತ್ತಾರೆ. ರಾಜ್ಯದಲ್ಲಿ ಏನಾದ್ರೂ ಆದರೆ ಮುಖ್ಯಮಂತ್ರಿ ಮಾಡುತ್ತಾರೆ ಎಂದು ಹೇಳಿದರು. ಖರ್ಗೆಯವರು ಸ್ಪಷ್ಟವಾಗಿ ಹೇಳಿದ್ದಾರೆ ಇಂತಹ ಯಾವುದೇ ಆಸೆ ಇಲ್ಲ ಎಂದ್ರು. ಆದ್ರೂ ಸಮ್ಮನೆ ಯಾಕೆ ಗೊಂದಲ ಸೃಷ್ಟಿ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಖರ್ಗೆ ಸಾಹೇಬರು ಏನಾದ್ರು ಹೇಳಿದ್ದಾರ ಅವರು ಏನ್ ಹೇಳಿದ್ದಾರೆ ಪೂರ್ತಿ ಕೇಳಿ.. ಸಮ್ಮನೆ ಯಾಕೆ ಗೊಂದಲ ಸೃಷ್ಟಿ ಮಾಡಬೇಡಿ ಎಂದ್ರು.
ಇನ್ನು ಧರ್ಮಸ್ಥಳದಲ್ಲಿ ನಿಗೂಢ ಶವಗಳನ್ನು ಹೂತಿಟ್ಟಿರುವ ಸಂಬಂಧ ಎಸ್ಐಟಿ ತನಿಖೆ ವಿಚಾರವಾಗಿ ಮಾತನಾಡಿದ ಅವರು ಎಸ್ಐಟಿ ತಂಡಕ್ಕೆ ನಿನ್ನೆ ಹದಿಮೂರು ಸ್ಥಳ ತೋರಿಸಿದ್ದಾರೆ ಮಾರ್ಕ್ ಮಾಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿದೆ. ಯಾರು ಎಷ್ಟೇ ಪ್ರಭಾವಿಗಳಿದ್ರು ಕ್ರಮ ಕೈಗೊಳ್ಳುತ್ತೆ. ಆರ್.ಅಶೋಕ್ ಗೃಹ ಸಚಿವರಾಗಿದ್ದರು ಅವರಿಗೆ ಕಾನೂನು ಗೊತ್ತಿಲ್ಲ. ಅವರಿಗೇನು ಒತ್ತಡ ಇತ್ತು ತನಿಖೆ ಮಾಡಿಸೋಕೆ ಕೇಳಿದವರು ಹೇಳಿಲ್ಲಾ ಅಂತಾ ಮಾಡಿಸಿಲಿಲ್ಲವಾ..? ಆರ್. ಅಶೋಕ್ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ಮಾತಾಡಬೇಕು ಬಾಲಿಶ ಹೇಳಿಕೆ ಕೊಡುವುದನ್ನು ಬಿಡಬೇಕು ಎಂದು ಕಿಡಿಕಾರಿದ್ರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಖರ್ಗೆ ಅಸಹಾಯಕತೆಯಿಂದ ಹೇಳಿಕೆ ನೀಡಿದ್ದಾರೆ ಎಂಬ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ಅವರು ಪೂಜ್ಯ ಅಪ್ಪಾಜಿಯನ್ನ ಕಣ್ಣೀರಿಟ್ಟು ಕೆಳಗಿಳಿಸಿದ್ರಲ್ಲ ಅದರ ಬಗ್ಗೆ ಮಾತನಾಡಲಿ. ಕುಮಾರಸ್ವಾಮಿ ಅವರು ಅನ್ಯಾಯ ಮಾಡಿದ್ರು ಕಣ್ಣಿರು ಹಾಕಿದ್ರು. ಈ ಬಾರಿ ಕೂಡ ಬೊಮ್ಮಾಯಿಯವರನ್ನ ಸಿಎಂ ಮಾಡಬೇಕಾದಾಗ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಣ್ಣಿರು ಹಾಕಿ ಇಳಿಸಿದ್ರಲ್ಲ. ಖರ್ಗೆ ಸಾಹೇಬರು ಯಾವತ್ತು ರಾಜಕೀಯ ಹುದ್ದೆಗಾಗಿ ಕಣ್ಣೀರು ಹಾಕಿಲ್ಲ ಹಾಕೋದಿಲ್ಲ. ವಿಜಯೇಂದ್ರ ಅವರು ಇತಿಹಾಸ ನೋಡಲಿ ಎಂದು ಕಿಡಿಕಾರಿದ್ರು.
ಮುಖ್ಯಮಂತ್ರಿಗಳು ಶಾಸಕರ ಸಭೆಗೆ ಡಿಸಿಎಂಗೆ ಅಹ್ವಾನ ನೀಡದೆ ಇರುವ ವಿಚಾರ ಮಾತನಾಡಿದ ಅವರು ಮುಖ್ಯಮಂತ್ರಿಗಳು ಶಾಸಕರನ್ನ ಕರೆದು ಮಾತಾಡಿದ್ರು ಏನಾಗಿದೆ. ಡಿಸಿಎಂ ಅವರಿಗೆ ಎಲ್ಲಾ ವಿಚಾರದಲ್ಲೂ ಕೂಡ ಅಹ್ವಾನ ಇರುತ್ತೆ.ಇವರಿಗೇನು ಕೇಶವ ಕೃಪಾದಲ್ಲಿ ಮೀಟಿಂಗ್ ಮಾಡಬೇಕಾ..? ಎಂದು ಪ್ರಶ್ನಿಸಿದ್ರು.


